October 3, 2026
Saturday, October 3, 2026
spot_img

ಚಾಕು ಮಾರಾಟ ಮಾಡಿದ್ದಕ್ಕಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕಿಟ್‌ ಮೇಲೆ ಕೇಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ಪ್ರತ್ಯೇಕ ಕೊಲೆ ಕೇಸ್‌ಗಳಲ್ಲಿ ಆರೋಪಿಗಳು ಬ್ಲಿಂಕಿಟ್‌ನಿಂದ ಚಾಕು ಆರ್ಡರ್‌ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕಾರಣದಿಂದಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕಿಟ್‌ ಮೇಲೆ ಕೇಸ್‌ ದಾಖಲಾಗಿದೆ.

ದೆಹಲಿ ಪೊಲೀಸರು ಆರೋಪಿಗಳ ಮಾತನ್ನು ಆಲಿಸಿ ಬ್ಲಿಂಕಿಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಸೌತ್‌ ಡೆಲ್ಲಿಯಲ್ಲಿ ರತಡಿ ಕೊಲೆ ನಡೆದಿತ್ತು. ಎರಡೂ ಕೊಲೆಯಲ್ಲಿ ಆರೋಪಿಗಳು ಬ್ಲಿಂಕಿಟ್‌ನಿಂದ ಚಾಕು ಖರೀದಿ ಮಾಡಿದ್ದಾಗಿ ಹೇಳಿದ್ದಾರೆ.

ಸರ್ಕಾರಿ ನಿಯಮಗಳ ಪ್ರಕಾರ, 7.62 ಸೆಂ.ಮೀ. ಉದ್ದ ಮತ್ತು 1.72 ಸೆಂ.ಮೀ. ಅಗಲದ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಅದಕ್ಕಿಂತ ದೊಡ್ಡದಾದ ಯಾವುದೇ ಚಾಕು ಮಾರಾಟ ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಮತ್ತು ಅದು ಕ್ರಿಮಿನಲ್ ಅಪರಾಧ ಎನಿಸಿಕೊಳ್ಳುತ್ತದೆ. ಪೊಲೀಸರಿಗೆ ತಲುಪಿಸಿದ ಚಾಕು 8 ಸೆಂ.ಮೀ. ಉದ್ದ ಮತ್ತು 2.5 ಸೆಂ.ಮೀ. ಅಗಲವಿದ್ದು, ಇದು ಕಾನೂನು ಮಿತಿಗಳನ್ನು ಮೀರಿದೆ ಎನ್ನಲಾಗಿದೆ.

ಇನ್ನು ದೆಹಲಿಯಲ್ಲಿ ಪೊಲೀಸರು ಬ್ಲಿಂಕಿಟ್‌ ಶಾಖೆಗಳ ಮೇಲೆ ದಾಳಿ ನಡೆಸಿದ್ದು, 55ಕ್ಕೂ ಹೆಚ್ಚು ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ.

Must Read