ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಕೇಸ್: ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ನಟ ಪ್ರಕಾಶ್ ರೈ

ಹೊಸದಿಗಂತ ಡಿಜಿಟಲ್ ಡೆಸ್ಕ್;
 
ಅಕ್ರಮ ಬೆಟ್ಟಿಂಗ್, ಜೂಜಾಟ ಮತ್ತು ಕ್ಯಾಸಿನೊ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದಕ್ಕೆ ನಟ ಪ್ರಕಾಶ್ ರೈ ವಿರುದ್ಧ ಕೇಸ್ ದಾಖಲಾಗಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದ್ದಾರೆ.

ತುಂಬಾ ವರ್ಷಗಳ ಹಿಂದೆ ಆ ಜಾಹಿರಾತು ಮಾಡಿದ್ದು ನಿಜ.. ಬಳಿಕ ಅದು ತಪ್ಪು ಎಂದು ತಿಳಿಯಿತು. ಕೂಡಲೇ ಅದನ್ನು ನಿಲ್ಲಿಸಿದೆ. ಅಂತೆಯೇ ನನ್ನ ಜಾಹಿರಾತು ಬಳಕೆ ಮಾಡದಂತೆ ಆ ಸಂಸ್ಥೆಗೂ ಸೂಚಿಸಿದ್ದೆ ಎಂದು ಹೇಳಿದ್ದಾರೆ.

ಈಗಷ್ಟೇ ನನಗೆ ಬೆಟ್ಟಿಂಗ್ ಆ್ಯಪ್ ಪ್ರಕರಣದ ಕುರಿತು ಮಾಹಿತಿ ತಿಳಿಯಿತು. ಎಲ್ಲರನ್ನೂ ಪ್ರಶ್ನಿಸುವ ನಾನು ನನ್ನ ಬಗ್ಗೆ ಪ್ರಶ್ನೆಗಳು ಎದ್ದಾಗ ಅದಕ್ಕೆ ಉತ್ತರ ನೀಡಬೇಕು. ಪೊಲೀಸ್ ಪ್ರಕರಣದ ಬಗ್ಗೆ ಹೇಳುತ್ತಿದ್ದಾರೆ. ಆದರೆ ನನಗೆ ಈ ವರೆಗೂ ಪೊಲೀಸರಿಂದ ಯಾವುದೇ ಸಂದೇಶ ಬಂದಿಲ್ಲ. ಬಂದರೂ ಅದಕ್ಕೆ ನಾನು ಉತ್ತರ ನೀಡುತ್ತೇನೆ. ಆದರೆ ನಿಮಗೆ ನಾನು ಉತ್ತರ ನೀಡಲೇಬೇಕು. ಹೀಗಾಗಿ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

https://x.com/prakashraaj/status/1902693847978664173?ref_src=twsrc%5Etfw%7Ctwcamp%5Etweetembed%7Ctwterm%5E1902693847978664173%7Ctwgr%5E0f52c09b58193de295e2039f769490f1bd85ff37%7Ctwcon%5Es1_&ref_url=https%3A%2F%2Fwww.kannadaprabha.com%2Fcinema%2Fnews%2F2025%2FMar%2F20%2Fbetting-app-advertisement-i-realized-it-was-a-mistake-dont-ruin-your-life-actor-prakash-raj

2016ರಲ್ಲಿ ನನಗೆ ಈ ಬೆಟ್ಟಿಂಗ್ ಆ್ಯಪ್ ಜಾಹಿರಾತು ಬಂತು. ನಾನು ಕೂಡ ಆ ಜಾಹಿರಾತು ಮಾಡಿದ್ದೆ. ಆದರೆ ಬಳಿಕ ಅದು ತಪ್ಪು ಎಂದು ತಿಳಿದು ಅದನ್ನು ನಿಲ್ಲಿಸಲು ಯತ್ನಿಸಿದೆ. ಆದರೆ ಒಪ್ಪಂದದ ಅನ್ವಯ ಒಂದು ವರ್ಷ ಜಾಹಿರಾತು ನಡೆದಿತ್ತು. 2017ರಲ್ಲಿ ಜಾಹಿರಾತು ವಿಸ್ತರಣೆಗೆ ಅವರು ಬಂದಿದ್ದರು.ಆದರೆ ನಾನು ಅದಕ್ಕೆ ನಿರಾಕರಿಸಿದೆ. ಬಳಿಕ ಅಂತಹ ಯಾವುದೇ ಗೇಮಿಂಗ್ ಆ್ಯಪ್ ಗಳಿಗೆ ನಾನು ಜಾಹಿರಾತು ನೀಡಿಲ್ಲ.

2021ರಲ್ಲಿ ಆ ಕಂಪನಿ ಆ ಜಾಹಿರಾತನ್ನು ಬೇರೆ ಸಂಸ್ಥೆಗೆ ಮಾರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಿತ್ತು. ಆದರೆ ನಾನು ಅವರಿಗೆ ಅದನ್ನು ಬಳಕೆ ಮಾಡದಂತೆ ದೂರು ದಾಖಲಿಸಿದ್ದೆ. ಬಳಿಕ ಅವರು ಅದನ್ನು ನಿಲ್ಲಿಸಿದರು. ಇದೀಗ ಮತ್ತೆ ಅದು ಲೀಕ್ ಆಗಿದೆ. ಹೀಗಾಗಿ ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಯುವಕರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ಇಂತಹ ಗೇಮಿಂಗ್ ಆ್ಯಪ್ ಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಅದೊಂದು ವ್ಯಸನ.. ಎಂದು ಹೇಳಿದ್ದಾರೆ.

ಅಕ್ರಮ ಬೆಟ್ಟಿಂಗ್, ಜೂಜಾಟ ಮತ್ತು ಕ್ಯಾಸಿನೊ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿ ಸಾರ್ವಜನಿಕರಿಗೆ ಆರ್ಥಿಕ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ನಟ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಮತ್ತು ನಿಧಿ ಅಗರ್ವಾಲ್ ಸೇರಿದಂತೆ ಟಾಲಿವುಡ್ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸೇರಿದಂತೆ 25 ಜನರ ವಿರುದ್ಧ ತೆಲಂಗಾಣದ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!