ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೋದಿಗೆ ಮತ ಕೇಳಿದ್ದ ಕೇಸ್‌: ತಡೆಯಾಜ್ಞೆ ನೀಡಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮತ ಕೇಳಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ವಿರುದ್ಧ ಚುನಾವಣಾಧಿಕಾರಿ ಕೇಸ್​ ದಾಖಲಿಸಿದ್ದರು. ಫ್ಲೈಯಿಂಗ್ ಸ್ಕ್ವಾಡ್ ದಾಖಲಿಸಿದ್ದ ಕೇಸ್ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ನೀತಿ ಸಂಹಿತಿಗಿಂತ ಮೊದಲು ಆಹ್ವಾನಪತ್ರಿಕೆ ಮುದ್ರಣ ಹಿನ್ನೆಲೆ ಕೇಸ್​​ಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮದುಮಗ ಶಿವಪ್ರಸಾದ್​ ಅವರು ತಮ್ಮ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ‘ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್ ನೀಡಿದಂತೆ’ ಎಂದು ಮುದ್ರಿಸಿದ್ದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ವರನ ವಿರುದ್ಧ ಏಪ್ರಿಲ್ 17ರಂದು ಚುನಾವಣಾ ನೋಡಲ್​ ಅಧಿಕಾರಿಗಳಿಗೆ ದೂರು ಬಂದಿತ್ತು. ನಂತರ ಚುನಾವಣಾಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ಮದುಮಗನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮದುಮಗ ಪರ ವಕೀಲ ಎಂ.ವಿನೋದ್ ಕುಮಾರ್ ಕೇಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಆದರೆ ಚುನಾವಣಾ ನೀತಿಸಂಹಿತೆ ಮಾರ್ಚ್​ 16ರಂದು ಜಾರಿಯಾಗಿದೆ. ಹೀಗಾಗಿ ಕೇಸ್ ರದ್ದು ಮಾಡುವಂತೆ ವಕೀಲ ಎಂ.ವಿನೋದ್ ಕುಮಾರ್ ಮನವಿ ಮಾಡಿದರು. ವಾದವನ್ನು ಆಲಿಸಿದ ಹೈಕೋರ್ಟ್​ ಕೇಸ್​ಗೆ ತಡೆಯಾಜ್ಞೆ ನೀಡಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತ್ತು.

ಇನ್ನು ಇಂಥಹದ್ದೇ ಒಂದು ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿತ್ತು. ವರನ ತಂದೆಯೊಬ್ಬರು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದೊಂದಿಗೆ ‘ಉಡುಗೊರೆ ಬೇಡ, ಅದರ ಬದಲಿಗೆ ಮೋದಿಗೆ ಮತ ಹಾಕಿ’ ಎಂದು ಮನವಿ ಮಾಡಿಕೊಂಡಿದ್ದರು. ಇದು ಸಾಕಷ್ಟು ವೈರಲ್ ಕೂಡ ಆಗಿತ್ತು. ಏಪ್ರಿಲ್ 4 ರಂದು ಮದುವೆ ನಡೆದಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!