October 15, 2026
Thursday, October 15, 2026
spot_img

ಕಾವೇರಿ ನೀರು ಬಿಡುವಂತಿಲ್ಲ! ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಮಂಡ್ಯ ಭಾಗದ ರೈತರು, ರೈತ ಸಂಘಟನೆಗಳು ನಮ್ಮ ಹೋರಾಟಕ್ಕೆ, ನಮ್ಮ ಜೀವಜಲ ಉಳಿಸುವುದಕ್ಕೆ ಸಾಥ್‌ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಬರ ಪರಿಸ್ಥಿತಿ ಇದೆ, ಯಾರು ಕೂಡ ಬೆಳೆ ಬೆಳೆಯಬೇಡಿ ಎಂದು ಸಿಎಂ ಕೆಲವು ದಿನದ ಹಿಂದೆ ಕರೆ ಕೊಟ್ಟಿದ್ದರು. ಈಗ ನೀರು ಬೇರೆ ರಾಜ್ಯಕ್ಕೆ ಕೊಡಬೇಕು ಅದಕ್ಕೆ ನೀವು ಬೆಳೆ ಬೆಳೆಯಬೇಡಿ ಎಂದು ಹೇಳುವ ಪರಿಸ್ಥಿತಿ ಬರಬಹುದು. ರಾಜ್ಯದ ರೈತರಿಗೆ ಸಿಎಂ ಧೈರ್ಯ ತುಂಬಬೇಕಿತ್ತು. ಅವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಗಳನ್ನು ಖುಷಿ ಪಡಿಸಲು ರಾಜ್ಯದ ರೈತರಿಗೆ ಸಿಎಂ ಅನ್ಯಾಯ ಮಾಡಿದ್ದರು. ಯಾಕೇ ಇಂತಹ ಕಪಟ ನಾಟಕ ಮಾಡುತ್ತಿದ್ದೀರಿ? ಸಿಎಂ ಯಾಕೆ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ? ಈ ಚೆಲ್ಲಾಟ ಆಡೋದು ಬಿಟ್ಟು, ಸಮಿತಿಗೆ ಮರು ಪರಶೀಲನಾ ಅರ್ಜಿ ದಾಖಲಿಸಬೇಕು ಎಂದು ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

Must Read