ರಾಜೇಂದರ್ ಕುಮಾರ್ ಗುಪ್ತಾ ನಿವಾಸದ ಮೇಲೆ ಸಿಬಿಐ ದಾಳಿ: 38 ಕೋಟಿ ರೂಪಾಯಿ ಜಪ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಲವಿದ್ಯುತ್ ಸಚಿವಾಲಯದ ಅಡಿಯಲ್ಲಿ ವಾಪ್ಕಾಸ್ ನೀರು ಮತ್ತು ಒಳಚರಂಡಿ ಕನ್ಸಲ್ಟೆನ್ಸಿಯ ಮಾಜಿ ಸಿಎಂಡಿ ರಾಜೇಂದರ್ ಕುಮಾರ್ ಗುಪ್ತಾ ಅವರ ನಿವಾಸವನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಿದ್ದಾರೆ. ರಾಜೇಂದರ್ ಕುಮಾರ್ ಗುಪ್ತಾ ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳು ಅವರಿಗೆ ಸೇರಿದ 19 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ದೆಹಲಿ, ಗುಡ್ಗಾಂವ್, ಪಂಚಕುಲ, ಸೋನಿಪತ್ ಮತ್ತು ಚಂಡೀಗಢದ ನಿವಾಸಗಳು ಸೇರಿದಂತೆ ದೇಶಾದ್ಯಂತ 19 ಸ್ಥಳಗಳಲ್ಲಿ ನಡೆಸಿದ ಈ ತಪಾಸಣೆಯಲ್ಲಿ 38ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣಗಳು ದಾಖಲಿಸಲಾಗಿದೆ.

38 ಕೋಟಿ ರೂಪಾಯಿ ನಗದು, ವಿವಿಧ ಆಸ್ತಿ, ಆಭರಣಗಳು ಮತ್ತು ದುಬಾರಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಾಪ್ಕಾಸ್‌ನ ಮಾಜಿ ಸಿಎಂಡಿ ರಾಜಿಂದರ್ ಕುಮಾರ್ ಗುಪ್ತಾ ಮತ್ತು ಅವರ ಪುತ್ರ ಗೌರವ್ ಸಿಂಗಲ್ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಸಿಬಿಐ ಅವರನ್ನು ಬಂಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!