ಗೋವುಗಳ ಕಳ್ಳಸಾಗಣೆ ದಂಧೆ: ಮಮತಾ ಬ್ಯಾನರ್ಜಿ ಆಪ್ತನನ್ನು ಬಂಧಿಸಿದ ಸಿಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪಶ್ಚಿಮ ಬಂಗಾಳದ ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಅನುಬ್ರತಾ ಮೊಂಡಲ್ ಅವರನ್ನು ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಗುರುವಾರ ಬಂಧಿಸಿದೆ.
ಬಿರ್ಭೂಮ್ ಜಿಲ್ಲೆಯ ನಿವಾಸದಿಂದ ಮೊಂಡಲ್ರನ್ನು ಬಂಧಿಸಲಾಗಿದೆ. ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಿಬಿಐ 10 ಬಾರಿ ಸಮನ್ಸ್‌ ಕಳುಹಿಸಿದಿದ್ದರೂ ಅನುಬ್ರತಾ ಮೊಂಡಲ್ ಹಾಜರಾಗಿರಲಿಲ್ಲ. ಸಿಬಿಐನಿಂದ ಬಂಧನಕ್ಕೆ ವಿನಾಯಿತಿ ಕೋರಿ ಮೊಂಡಲ್ ಸುಪ್ರೀಂ ಕೋರ್ಟ್‌ಗೆ ತೆರಳಲು ಯೋಜಿಸಿದ್ದರು.
ವೈದ್ಯಕೀಯ ತಪಾಸಣೆಯ ಕಾರವೊಡ್ಡಿ ಸಿಬಿಐ ತನಿಖೆಗೆ ಹಾಜರಾಗಲು ನಿರಾಕರಿಸಿದ್ದರು. ಸಿಬಿಐ ಅವರಿಗೆ ಬುಧವಾರ (ಆಗಸ್ಟ್ 10) ರಂದು ಹೊಸ ಸಮನ್ಸ್ ನೀಡಿತ್ತು. ತಕ್ಷಣವೇ ಮೊಂಡಲ್‌ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಕೆಲವು ಜನರು ಟಿಎಂಸಿ ನಾಯಕನನ್ನು “ದನ ಕಳ್ಳ” ‘ಚೋರ್ ಚೋರ್’ ಘೋಷಣೆ ಕೂಗಿ ವ್ಯಂಗ್ಯವಾಡಿದ್ದರು.
2020 ರಲ್ಲಿ ಸಿಬಿಐ ಜಾನುವಾರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಿಸಿದ ಎಫ್‌ಐಆರ್ ನಲ್ಲಿ ಮ ಮೊಂಡಾಲ್ ಹೆಸರು ಕೇಳಿಬಂದಿದೆ. ಸಿಬಿಐ ಪ್ರಕಾರ, 2015 ಮತ್ತು 2017 ರ ನಡುವೆ ಗಡಿಯಾಚೆಗೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 20,000 ದನದ ತಲೆಗಳನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!