ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಾಟನಪೇಟೆ ಗೋದಾಮಿನಲ್ಲಿ ನಕಲಿ FMCG ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದ ಅಡ್ಡದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯ ಕಾಚೋಹಳ್ಳಿ ಕಾರ್ಖಾನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ವೇಳೆ 1. 75 ಕೋಟಿ ಮೌಲ್ಯದ ನಕಲಿ ಡಿಟರ್ಜೆಂಟ್, ಟೀ ಪುಡಿ, ಮಸ್ಕಿಟೋ ಕಾಯಿಲ್ ಪತ್ತೆಯಾಗಿದೆ.ನಕಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ದಳಪತ್ ಸಿಂಗ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.