ಹೊಸದಿಗಂತ ವರದಿ,ಮೈಸೂರು:
ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ನಗರದ ಸಿಸಿಬಿ ಪೊಲೀಸರು ಮೂವರು ಮಹಿಳೆಯರನ್ನ ರಕ್ಷಿಸಿ ಮಾಲೀಕರನ್ನ ಬಂಧಿಸಿ, ಮೂವರು ಗ್ರಾಹಕರನ್ನ ವಶಕ್ಕೆ ಪಡೆದಿದ್ದಾರೆ.
ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೂಯೆಜ್ ಫಾರಂ ರಸ್ತೆಯಲ್ಲಿರುವ ಶ್ರೀ ಬ್ಯೂಟಿ ಪಾರ್ಲರ್ ಅಂಡ್ ಸ್ಪಾ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾಗ ವೇಳೆ ಮೂವರು ಮಹಿಳೆಯರಿಗೆ ಹಣದ ಆಮಿಷ ತೋರಿಸಿ ವೇಶ್ಯಾವಟಿಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಲಕ್ಷ್ಮಿ ಎಂಬುವರ ಒಡೆತನದಲ್ಲಿ ಸ್ಪಾ ನಡೆಯುತ್ತಿದೆ.
ಲಕೋಟೆ ಎಂಬ ಅಪ್ ಮೂಲಕ ಗ್ರಾಹಕರನ್ನ ಸೆಳೆಯಲಾಗುತ್ತಿರುವುದು ತನಿಖೆ ವೇಳೆ ಬಯಲಾಗಿದೆ. ಆನ್ ಲೈನ್ ನಲ್ಲೇ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವುದೂ ಸಹ ತನಿಖೆಯಲ್ಲಿ ತಿಳಿದು ಬಂದಿದೆ.ಸ್ಪಾ ಮಾಲೀಕಿ ಲಕ್ಷ್ಮಿ ಎಂಬಾಕೆಯನ್ನು ಬಂಧಿಸಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.