ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಹೊರವಲಯದಲ್ಲಿರುವ ಸಿಂಗೇನಾ ಅಗ್ರಹಾರದ ಫಾರ್ಮ್‌ಹೌಸ್‌ನಲ್ಲಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ತೆಲುಗಿನ ನಟ-ನಟಿಯರು, ಮಾಡೆಲ್ ಗಳು, ಟೆಕ್ಕಿಗಳು ಪಾಲ್ಗೊಂಡಿದ್ದು ಪತ್ತೆಯಾಗಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ್ ರೆಡ್ಡಿ ಅವರ ಜಿಆರ್ ಫಾರಂ ಹೌಸ್ ನಲ್ಲಿ ಹೈದರಾಬಾದ್ ನ ವಾಸು ಎಂಬುವವರು ರೇವ್ ಪಾರ್ಟಿ ಆಯೋಜಿಸಿದ್ದರು. ಈ ಗುಂಪಿನಲ್ಲಿ ಆಂಧ್ರಪ್ರದೇಶ ಮತ್ತು ಬೆಂಗಳೂರಿನ 100 ಕ್ಕೂ ಹೆಚ್ಚು ಯುವಕ ಯುವತಿಯರು ಇದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಮಯ ಮಿತಿಯನ್ನು ಮೀರುವುದರ ಜೊತೆಗೆ, ಪಾರ್ಟಿಯಲ್ಲಿ ಎಂಡಿಎಂಎ ಮತ್ತು ಕೊಕೇನ್ ಸೇರಿದಂತೆ ಅನೇಕ ರೀತಿಯ ಡ್ರಗ್‌ಗಳು ಕಂಡುಬಂದಿವೆ.
ಸಿಸಿಬಿ ಅಧಿಕಾರಿಗಳು ನಾರ್ಕೊಟಿಕ್ಸ್ ಸ್ನಿಫರ್ ನಾಯಿಗಳನ್ನು ಬಳಸಿಕೊಂಡು ಕಾರುಗಳ ಮಾಲೀಕರ ಸಮಕ್ಷಮದಲ್ಲಿ ಕಾರುಗಳನ್ನು ಪರಿಶೀಲಿಸಲಾಗುತ್ತದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. .