ಟೆಕ್‌ ದೈತ್ಯ ಗೂಗಲ್‌ ಗೆ ಬರೋಬ್ಬರಿ 1,337 ಕೋಟಿ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಲು ಸ್ಪರ್ಧಾತ್ಮಕ ನೀತಿಗಳನ್ನು ಉಲ್ಲಂಘಿಸಿದ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ಗೆ ದೇಶದ ಸ್ಪರ್ಧಾತ್ಮಕ ಆಯೋಗ (CCI) ಬರೋಬ್ಬರಿ 1,337.76 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ.
ತನ್ನ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ (OS) ನೊಂದಿಗೆ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದ ಗೂಗಲ್‌, ಅನಾರೋಗ್ಯಕರ ಸ್ಪರ್ಧಾ ವಿಧಾನಗಳನ್ನು ಅನುಸರಿಸುತ್ತಿತ್ತು. ಈ ಕಾರಣಕ್ಕಾಗಿ ಗೂಗಲ್‌ ಗೆ ಆಭರೀ ದಂಡ ವಿಧಿಸಲಾಗಿದೆ. ಜೊತೆಗೆ ಕಂಪನಿಗೆ ಸುಮಾರು ಒಂದು ಡಜನ್ ಪ್ರಮುಖ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.
ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ಸಾಧನಗಳ ತಯಾರಕರು ತಮ್ಮ ಸಾಧನಗಳಲ್ಲಿ ಗೂಗಲ್ ಸೇವೆಗಳನ್ನು ಕಡ್ಡಾಯವಾಗಿ ಇಡುವಂತೆ ಒತ್ತಾಯಿಸಬಾರದು ಎಂದು ಆಯೋಗ ಸೂಚಿಸಿದೆ. ಪ್ರತಿಸ್ಪರ್ಧಿಗಳೂ ನ್ಯಾಯಯುತ ಪ್ರವೇಶ ಪಡೆಯಲು ಅವಕಾಶ ಒದಗಿಸುವಂತೆ ಅದು ಗೂಗಲ್‌ ಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!