ಇಸ್ರೇಲ್ – ಹಮಾಸ್ ನಡುವಣ ಕದನ ವಿರಾಮ: 200 ಲಾರಿಗಳಲ್ಲಿ ಗಾಜಾಪಟ್ಟಿಗೆ ಬಂತು ಮಾನವೀಯ ನೆರವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಇಸ್ರೇಲ್ – ಹಮಾಸ್ ನಡುವಣ ಕದನ ವಿರಾಮ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಹಾಗೂ ಈಜಿಪ್ಟ್‌ ನಡುವಣ ಗಡಿ ಪ್ರದೇಶ ರಫಾಗೆ ಮಾನವೀಯ ನೆರವು ಸಾಗರೋಪಾದಿಯಲ್ಲಿ ಹರಿದು ಹೋಗುತ್ತಿದೆ.

ಭಾನುವಾರ ಈಜಿಪ್ಟ್‌ ದೇಶದಿಂದ ಗಾಜಾ ಪಟ್ಟಿಗೆ ತೆರಳಿರುವ 200 ಲಾರಿಗಳಲ್ಲಿ ಆಹಾರ ಪದಾರ್ಥಗಳು, ವೈದ್ಯಕೀಯ ಸಲಕರಣೆಗಳು ಸೇರಿದಂತೆ ನಿರಾಶ್ರಿತರಿಗೆ ಬೇಕಾದ ಹಲವು ಅಗತ್ಯ ವಸ್ತುಗಳು ಇವೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನೊಂದೆಡೆ ಗಾಜಾ ಪಟ್ಟಿಗೆ ವಿದ್ಯುತ್, ಆಹಾರ ಪದಾರ್ಥ ಸರಬರಾಜಾಗುವ ಜೊತೆಯಲ್ಲೇ ಇದೀಗ ಈಜಿಪ್ಟ್ ದೇಶದ ಗಡಿಯಿಂದ ಅಂತಾರಾಷ್ಟ್ರೀಯ ಸಮುದಾಯ ರವಾನಿಸುತ್ತಿರುವ ಮಾನವೀಯ ನೆರವಿನ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ.

ಈಜಿಪ್ಟ್‌ನಿಂದ ರಫಾ ಗಡಿ ಮೂಲಕ ಪ್ಯಾಲಿಸ್ತೀನ್ ಭಾಗವಾದ ಗಾಜಾ ಪಟ್ಟಿಗೆ ಮಾನವೀಯ ನೆರವು ಹರಿದು ಹೋಗುತ್ತಿದ್ದು, ವಿಶ್ವ ಸಂಸ್ಥೆಯ ಕಣ್ಗಾವಲಿನ ಅಡಿ ಈ ಕಾರ್ಯ ನಡೆಯುತ್ತಿದೆ.

ವಿಶ್ವದೆಲ್ಲೆಡೆಯ ರಾಷ್ಟ್ರಗಳು ಗಾಜಾ ಪಟ್ಟಿಗೆ ರವಾನೆ ಮಾಡಿದ ಮಾನವೀಯ ನೆರವನ್ನು ಇದೀಗ ಟ್ರಕ್‌ಗಳ ಮೂಲಕ ಈಜಿಪ್ಟ್‌ನಿಂದ ಗಾಜಾ ಪಟ್ಟಿಗೆ ರವಾನೆ ಮಾಡಲಾಗಿದೆ. ಕದನ ವಿರಾಮ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಮಾನವೀಯ ನೆರವನ್ನು ರವಾನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!