ಕದನ ವಿರಾಮ ಘೋಷಿಸಿ ರಾಜತಾಂತ್ರಿಕ ಹಾದಿಗೆ ಮರಳಿ; G20 ಶೃಂಗಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ಜಗತ್ತು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದಾರೆ.
“ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂಬ ವಿಚಾರವನ್ನು ನಾನು ಪದೇ ಪದೇ ಪ್ರಸ್ತಾಪಿಸುತ್ತಿದ್ದೇನೆ. ಕಳೆದ ಶತಮಾನದಲ್ಲಿ, ಎರಡನೆಯ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನುಂಟುಮಾಡಿತು. ಅದರ ನಂತರ, ಅಂದಿನ ನಾಯಕರು ಗಂಭೀರ ರಾಜತಾತ್ರಿಕತೆಯನ್ನು ಅಳವಡಿಸಿಕೊಂಡರು. ಶಾಂತಿಯ ಹಾದಿಯನ್ನು ಹಿಡಿಯುವ ಪ್ರಯತ್ನ ನಡೆಸಿದರು. ಈಗ ನಮ್ಮ ಸರದಿ. ಕೋವಿಡ್ ನಂತರದ ಅವಧಿಗೆ ಹೊಸ ವಿಶ್ವ ಕ್ರಮವನ್ನು ರಚಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ” ಎಂದು ಪ್ರಧಾನಿ ಮಾರ್ಮಿಕವಾಗಿ ನುಡಿದರು.
“ವಿಶ್ವದಲ್ಲಿ ಶಾಂತಿ, ಸಾಮರಸ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪರಸ್ಪರ ಬಂಧ ಮತ್ತು ಸಾಮೂಹಿಕ ಸಂಕಲ್ಪವನ್ನು ತೋರಿಸುವುದು ಈ ಸಮಯದ ಅಗತ್ಯವಾಗಿದೆ” ಎಂದು ಅವರು ಕರೆನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!