ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸುವುದು, ಸೂಕ್ತ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ್ಗೆ ಕೈತೊಳೆಯುವಂತಹ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ‘ಮನ್ ಕಿ ಬಾತ್’ನ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಮುಂಬರುವ ದಿನಗಳಲ್ಲಿ ಈದ್, ಅಕ್ಷಯ ತೃತೀಯ, ಭಗವಾನ್ ಪರಶುರಾಮರ ಜಯಂತಿ ಮತ್ತು ವೈಶಾಖ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುವುದು. ‘ಈ ಎಲ್ಲಾ ಹಬ್ಬಗಳು ಸಂಯಮ, ಪರಿಶುದ್ಧತೆ, ದಾನ ಮತ್ತು ಸಾಮರಸ್ಯಕ್ಕೆ ಒತ್ತು ನೀಡುತ್ತವೆ ಮತ್ತು ನಿಮ್ಮೆಲ್ಲರಿಗೂ ಮುಂಚಿತವಾಗಿ ಶುಭ ಹಾರೈಸುತ್ತೇನೆ’ ಎಂದರು.
ಇನ್ನು ಈ ಹಬ್ಬಗಳನ್ನ ಬಹಳ ಸಂಭ್ರಮದಿಂದ ಮತ್ತು ಸಾಮರಸ್ಯದಿಂದ ಆಚರಿಸಿ.ಆದರೆ ಇದೆಲ್ಲದರ ನಡುವೆ ಪ್ರತಿಯೊಬ್ಬರೂ ಕೊರೋನಾ ಬಗ್ಗೆಯೂ ಜಾಗರೂಕರಾಗಿರಬೇಕು ಎಂದು ಹೇಳಿದರು.