ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ: ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಷೇಕ್ ಅಂಬರೀಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮಕ್ಕೆ ರೆಡಿಯಾಗುತ್ತಿದ್ದು, ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು.

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಜೊತೆ ಅಭಿಷೇಕ್ ಇಂದು ನಿಶ್ಚಿತಾರ್ಥ ಮಾಡಿಕೊಂಡರು.
ಈ ವೇಳೆ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ದರ್ಶನ್ , ಯಶ್ ದಂಪತಿ ಮೊದಲಾದ ಗಣ್ಯರು ಹಾಜರಿದ್ದು, ಜೋಡಿಗಳಿಗೆ ಶುಭಹಾರೈಸಿದರು.

ಅವಿವಾ ಮತ್ತು ಅಭಿಷೇಕ್ ಹಲವು ವರ್ಷಗಳಿಂದ ಸ್ನೇಹಿತರು.ಇದೀಗ ಈ ನವ ಜೀವನಕ್ಕೆ ಕಾಲಿಡುತ್ತಿದೆ ಜೋಡಿ. ಈ ಜೋಡಿಯ ಮದುವೆ ಮುಂದಿನ ವರ್ಷ ನಡೆಯಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!