ಮೈಸೂರಿನ ಉತ್ತರಾದಿ ಮಠದಲ್ಲಿ ಸಂಭ್ರಮ: ದೇಶದ ಅತಿದೊಡ್ಡ ಧನ್ವಂತರಿ ಮೂರ್ತಿಗೆ ವಿಶೇಷ ಪೂಜೆ ಸಂಪನ್ನ

ಹೊಸದೊಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಸಪ್ತರಾತ್ರೋತ್ಸವದೊಂದಿಗೆ ಧನ್ವಂತರಿ ಜಯಂತಿ ಸಂಭ್ರಮದಿಂದ ಸಂಪನ್ನಗೊಂಡಿತು.

ಶ್ರೀ ಸತ್ಯಾತ್ಮತೀರ್ಥರಿಂದ ಪ್ರತಿಷ್ಠಾಪಿತ, ಭಾರತದಲ್ಲೇ ಅತಿ ದೊಡ್ಡದಾದ ಧನ್ವಂತರಿ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ , ಹೂವಿನ ಅಲಂಕಾರ ನೆರವೇರಿತು. ನೂರಾರು ಭಕ್ತರು ಧನ್ವಂತರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವದಲ್ಲಿ ಹಾಡಿ, ನಲಿದು, ನರ್ತಿಸುವ ಮೂಲಕ ಭಕ್ತಿ, ಭಾವ ಮೆರೆದರು.

ಇದೇ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಸಾಮೂಹಿಕವಾಗಿ ಶ್ರೀ ಹರಿವಾಯು ಸ್ತುತಿ ಪಾರಾಯಣ
ನೆರವೇರಿತು.

ಮಹಾಯಾಗ:
ಲೋಕ ಕಲ್ಯಾಣಾರ್ಥವಾಗಿ ಮತ್ತು ಸರ್ವರ ಆರೋಗ್ಯ ಪಾಲನೆ ಸಂಕಲ್ಪದೊಂದಿಗೆ ಶ್ರೀಮಠದಲ್ಲಿ
ಸಂಡೂರು ಹರೀಶ ಆಚಾರ್ಯರ ನೇತೃತ್ವದಲ್ಲಿ 10,000 ಅಮೃತ ಬಳ್ಳಿ ಆಹುತಿಯೊಂದಿಗೆ ಮಹಾ ಧನ್ವಂತರಿ ಯಾಗ ನೆರವೇರಿದ್ದು ವಿಶೇಷವಾಗಿತ್ತು. ಹಿರಿಯ ವಿದ್ವಾಂಸರಾದ ಗೋವಿಂದಾಚಾರ್ಯ ಮತ್ತು ಶೈಲಾ ದಂಪತಿ ಮಹಾ ಧನ್ವಂತರಿ ಯಾಗಕ್ಕೆ ಪೂರ್ಣಾಹುತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ನಂತರ 500ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಶ್ರೀ ಸತ್ಯ ಸಂತುಷ್ಟ ತೀರ್ಥರು ಮತ್ತು ಶ್ರೀ ಸತ್ಯ ಸಂಕಲ್ಪ ತೀರ್ಥರ ಮಹಾ ವೃಂದಾವನಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ಸಾಂಸ್ಕೃತಿಕ ವೈವಿಧ್ಯ:
ಸಪ್ತ ರಾತ್ರೋತ್ಸವದ ಅಂಗವಾಗಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಪ್ರತಿದಿನವೂ ಧನ್ವಂತರಿ ದೇವರಿಗೆ ಒಂದೊಂದು ವಿಶೇಷ ಅಲಂಕಾರ ಸಂಜೆ ರವಿಕುಮಾರ್ ನೇತೃತ್ವದಲ್ಲಿ ನವ, ಯುವ ಕಲಾವಿದರಿಂದ ಸಂಗೀತ ಮತ್ತು ನೃತ್ಯೋತ್ಸವ ರಂಜನೆ ನೀಡಿತು. ನಿತ್ಯವೂ ಪ್ರಮುಖ ಬೀದಿಗಳಲ್ಲಿ ಶ್ರೀ ಧನ್ವಂತರಿ ಉತ್ಸವ ಮೂರ್ತಿಯ ವಿವಿಧ ವಾಹನೋತ್ಸವ, ಸನ್ನಿಧಿಯಲ್ಲಿ ಸ್ವಸ್ತಿವಾಚನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನೆರವೇರಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು.

ಧನ್ವಂತರಿ ಸ್ವರೂಪದ ಪರಮಾತ್ಮ
ಸದಾ ನಮ್ಮ ಅವಯವಗಳನ್ನು ಸುಸ್ಥಿರ ವಾಗಿ ಇಟ್ಟು ಕಾಪಾಡಿದ್ದಾನೆ. ಅವನಿಗೆ ಒಂದು ಧನ್ಯತೆ ಸಮರ್ಪಣೆ ಮಾಡುವ ಭಾಗ್ಯ ನಮಗೆ ಈ ಜನ್ಮದಲ್ಲಿ ಶ್ರೀ ಸತ್ಯಾತ್ಮ ತೀರ್ಥರು ದೊರಕಿಸಿ ಕೊಟ್ಟಿದ್ದಾರೆ. ನಮ್ಮೆಲ್ಲರ ದೇಹ , ಮನಸ್ಸು ಆರೋಗ್ಯ ಕರವಾಗಿ ಇದ್ದು, ಇವೆಲ್ಲಾ ಧರ್ಮ ಕಾರ್ಯಗಳಿಗೆ ಸಮರ್ಪಣೆ ಆಗುತ್ತಿದೆ
ಎಂಬುದು ಅಹೋಭಾಗ್ಯ. ಧನ್ವಂತರಿ ಯನ್ನು ಆರಾಧಿಸಿ ವಿಶ್ವವೇ ಸ್ವಾಸ್ಥ್ಯ ದಿಂದ ಇರಲಿ ಎಂದು ಬೇಡೋಣ ಎಂದು ಧನ್ವಂತರಿ ಸನ್ನಿಧಿಯ ಪ್ರಧಾನ ವ್ಯವಸ್ಥಾಪಕ, ಅರ್ಚಕ, ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!