ರಜನಿಕಾಂತ್‌ 47ವರ್ಷಗಳ ಸಿನಿ ಜರ್ನಿ ಕಂಪ್ಲೀಟ್:‌ ಪತ್ನಿಯಿಂದ ಸ್ಪೆಷಲ್‌ ಸೆಲಬ್ರೇಷನ್

ಹೊಸದಿಗಣತ ಡಿಜಿಟಲ್‌ ಡೆಸ್ಕ್:‌ 

ಸೂಪರ್‌ಸ್ಟಾರ್ ರಜನಿಕಾಂತ್ ಸಾಮಾನ್ಯ ಬಸ್ ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್ ಆಗಿ ಬೆಳೆದು ಅನೇಕ ದೇಶಗಳಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಗಳಿಸಿದರು. 1975 ರಲ್ಲಿ ನಿರ್ದೇಶಕ ಕೆ. ಬಾಲಚಂದರ್ ಅವರ ಅಪೂರ್ವ ರಾಗಂಗಲ್ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಮೊದಲು ಖಳನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಚಿತ್ರಗಳನ್ನು ಮಾಡಿದ ಅವರು ನಂತರ ನಾಯಕನಾಗಿ ಅನೇಕ ಸೂಪರ್ ಹಿಟ್‌ ನೀಡಿದ್ರು. ರಜನಿಕಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 47 ವರ್ಷಗಳನ್ನು ಪೂರೈಸಿದ್ದಾರೆ. ಹಾಗಾಗಿ ಅನೇಕ ಸಿನಿಮಾ ತಾರೆಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನಟನಾಗಿ 47 ವರ್ಷಗಳನ್ನು ಪೂರೈಸಿದ ಹಿನ್ನೆಲೆ ರಜನಿಕಾಂತ್ ಅವರ ಪತ್ನಿ ಲತಾ ವಿಶೇಷವಾಗಿ ಸೆಲಬ್ರೇಷನ್‌ ಮಾಡಿದ್ರು. 47 ಇಯರ್ಸ್ ಆಫ್ ರಜಿನಿಸಂ ಎಂಬ ಬ್ಯಾನರ್ ಹಾಕಿ, ಕುಟುಂಬ ಸದಸ್ಯರ ನಡುವೆ ಹೂಗುಚ್ಚ ನೀಡಿ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಜನಿಕಾಂತ್ ಸದ್ಯ ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!