ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರೂ ನಟಿ ಮೃಣಾಲ್ ಠಾಕೂರ್‌ಗೆ ಯಶಸ್ಸು ನೀಡಿದ್ದು ಸೀತಾ ರಾಮಂ ಸಿನಿಮಾ.
ಸಿನಿಮಾದಲ್ಲಿ ಮೃಣಾಲ್ ಪಾತ್ರಕ್ಕೆ ಹಾಗೂ ಅವರ ಅಂದಕ್ಕೆ ಮನಸೋಲದವರಿಲ್ಲ. ಮೃಣಾಲ್ ಕಣ್ಣೀರು ಹಾಕಿದ ಫೋಟೊವೊಂದು ವೈರಲ್ ಆಗಿದೆ.
ನಟಿ ಮೃಣಾಲ್ ಸೆಲೆಬ್ರಿಟಿಗಳ ಜೀವನ ಸುಲಭ ಅಲ್ಲ, ನಿಮ್ಮಂತೆ ನಾವೂ ಮನುಷ್ಯರು, ನಮಗೂ ನೋವು ನಲಿವು ಇದೆ, ಸೆಲೆಬ್ರಿಟಿ ಆದ ಮಾತ್ರಕ್ಕೆ ಸದಾ ಖುಷಿಯಾಗಿದ್ದಾರೆ ಎನ್ನೋದು ತಪ್ಪು. ನಿನ್ನೆ ಕಷ್ಟಪಟ್ಟಿದ್ದೆ, ಇಂದು ಬಲಶಾಲಿಯಾಗಿದ್ದೇನೆ. ಬುದ್ಧಿವಂತೆ, ಖುಷಿಯ ಹುಡುಗಿ ಆಗಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿಯೂ ಜೋರಾಗಿ ಓದದ ಕೆಲ ಪುಟಗಳಿವೆ, ಆದರೆ ನಾನು ಜೋರು ಧ್ವನಿಯಲ್ಲಿ ಓದುತ್ತಿದ್ದೇನೆ. ನಾನು ಕಲಿತ ಪಾಠದಿಂದ ಇನ್ಯಾರಿಗೋ ಸಹಾಯವಾಗಬಹುದು ಎಂದಿದ್ದಾರೆ.
ವೈರಲ್ ಆಗಿರುವುದು ಹಳೆ ಫೋಟೊ, ಈಗ ನಾನು ಖುಷಿಯಾಗಿ ನೆಮ್ಮದಿಯಾಗಿದ್ದೇನೆ ಎಂದು ಮೃಣಾಲ್ ಹೇಳಿದ್ದಾರೆ.