ಸ್ಮಶಾನದ ಗೋಡೆ ಕುಸಿತ: 4 ಮಂದಿ ದಾರುಣ ಸಾವು, ಇಬ್ಬರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುರುಗ್ರಾಮದ ಸೈಬರ್ ಸಿಟಿಯ ಮದನ್‌ಪುರಿಯಲ್ಲಿರುವ ಸ್ಮಶಾನದ ಗೇಟ್‌ನ ಹಿಂದಿನ ಗೋಡೆ ಕುಸಿದು ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಓರ್ವ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ವಿಷಯ ತಿಳಿದ ತಕ್ಷಣ ಜಿಲ್ಲಾ ತಂಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪೊಲೀಸರ ಪ್ರಕಾರ, ಅರ್ಜುನ್ ನಗರ ರಸ್ತೆ ಸಂಖ್ಯೆ 8 ರಲ್ಲಿ ಸಂಜೆ 5.30 ರಿಂದ 6 ರ ನಡುವೆ ಈ ಘಟನೆ ನಡೆದಿದೆ. ಇಲ್ಲಿ ಸ್ಮಶಾನದ 18 ಅಡಿ ಎತ್ತರದ ಗೋಡೆ ಇದ್ದಕ್ಕಿದ್ದಂತೆ ಕುಸಿದಿದೆ. ಗೋಡೆಯ ಪಕ್ಕ ಕುಳಿತಿದ್ದ ಜನರು ಅವಶೇಷಗಳಡಿ ನಜ್ಜುಗುಜ್ಜಾಗಿದ್ದರು. ನಿವಾಸಿಗಳು ಅವಶೇಷಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರು. ಅವಶೇಷಗಳಡಿ ಸಿಲುಕಿದ್ದ ಜನರನ್ನು ಕೂಡಲೇ ರಕ್ಷಿಸಿ ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವಿ ದಯಾಳ್ (72), ಕೃಷ್ಣ ಕುಮಾರ್ (52), ಮನೋಜ್ (35) ಮತ್ತು ಬಾಲಕಿ ಖುಷ್ಬೂ (10) ಮೃತಪಟ್ಟವರು. ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!