October 17, 2026
Saturday, October 17, 2026
spot_img

ಕಡ್ಡಾಯ ಸರ್ವಿಸ್ ಚಾರ್ಜ್‌ಗೆ ಕೇಂದ್ರದ ಬ್ರೇಕ್: 41 ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರಾಹಕರ ಅನುಮತಿಯಿಲ್ಲದೆ ಬಿಲ್‌ನಲ್ಲಿ ಕಡ್ಡಾಯವಾಗಿ ಸರ್ವಿಸ್ ಚಾರ್ಜ್ ಸೇರಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. ಈ ರೀತಿಯ ವಸೂಲಿ ಗ್ರಾಹಕರ ಹಕ್ಕಿನ ಉಲ್ಲಂಘನೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಸರ್ವಿಸ್ ಚಾರ್ಜ್ ಸ್ವಯಂಪ್ರೇರಿತ

ಗ್ರಾಹಕರು ಇಚ್ಛಿಸಿದರೆ ಮಾತ್ರ ಸರ್ವಿಸ್ ಚಾರ್ಜ್ ಪಾವತಿಸಬಹುದು. ಅದನ್ನು ಬಿಲ್‌ಗೆ ಸ್ವಯಂಚಾಲಿತವಾಗಿ ಸೇರಿಸುವಂತಿಲ್ಲ ಎಂದು ಸಿಸಿಪಿಎ ಆದೇಶಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

ದಂಡ ಹಾಗೂ ಹಣ ಮರುಪಾವತಿ

ಕೆಲವು ರೆಸ್ಟೋರೆಂಟ್‌ಗಳಿಗೆ ದಂಡ ವಿಧಿಸಿರುವ ಪ್ರಾಧಿಕಾರ, ಗ್ರಾಹಕರಿಂದ ವಸೂಲಾದ ಸರ್ವಿಸ್ ಚಾರ್ಜ್ ಮರುಪಾವತಿಸಲು ಹಾಗೂ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಲು ಸೂಚಿಸಿದೆ. ಇತರ ದೂರುಗಳ ಪರಿಶೀಲನೆಯೂ ಮುಂದುವರಿದಿದೆ.

ದೂರು ಸಲ್ಲಿಸಲು ಅವಕಾಶ

ಕಡ್ಡಾಯ ಸರ್ವಿಸ್ ಚಾರ್ಜ್ ವಸೂಲಿ ಮಾಡಿದರೆ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು ಎಂದು ಸಿಸಿಪಿಎ ತಿಳಿಸಿದೆ.

Must Read