October 31, 2026
Saturday, October 31, 2026
spot_img

ತನಿಖಾ ದಕ್ಷತೆಗೆ ಕೇಂದ್ರದ ಪ್ರಶಸ್ತಿ: ಕರ್ನಾಟಕದ 7 ಅಧಿಕಾರಿಗಳಿಗೆ ಮನ್ನಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

2026ನೇ ಸಾಲಿನ ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕಕ್ಕೆ ಕರ್ನಾಟಕದ ಏಳು ಪೊಲೀಸ್ ಹಾಗೂ ವಿಧಿವಿಜ್ಞಾನ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರಿನ ಹಲಸೂರು ಗೇಟ್ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಶೋಭಾ ಎನ್. ಅವರಿಗೂ ಈ ಗೌರವ ಲಭಿಸಿದೆ.

ತನಿಖಾ ವಿಭಾಗದಲ್ಲಿ ಶೋಭಾ ಎನ್. ಸೇರಿದಂತೆ ಬೆಳಗಾವಿಯ ಮಾಳಮಾರುತಿ ಠಾಣೆಯ ಇನ್ಸ್‌ಪೆಕ್ಟರ್ ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್, ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ರಾಯಚೂರಿನ ದೇವದುರ್ಗ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್, ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಎಎಸ್‌ಐ ರತ್ನಮ್ಮ ಕೆ. ಹಾಗೂ ಸಿಐಡಿ ಘಟಕದ ಸಿಹೆಚ್‌ಸಿ ಬಾಲಕೃಷ್ಣ ವೈ. ಪದಕ ಪಡೆದಿದ್ದಾರೆ.

ವಿಧಿವಿಜ್ಞಾನ ಕ್ಷೇತ್ರದಲ್ಲಿ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕ ಡಾ. ಚಂದ್ರಶೇಖರ್ ಅವರಿಗೆ ಗೌರವ ದೊರೆತಿದೆ.

ಇದನ್ನೂ ಓದಿ:

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಈ ಪ್ರಶಸ್ತಿಗೆ ದೇಶಾದ್ಯಂತ ಒಟ್ಟು 490 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಅಪರಾಧ ತನಿಖೆಯಲ್ಲಿ ಅತ್ಯುತ್ತಮ ಸೇವೆ, ವೃತ್ತಿಪರತೆ ಮತ್ತು ಕರ್ತವ್ಯನಿಷ್ಠೆಯನ್ನು ಗುರುತಿಸಿ ಪದಕ ನೀಡಲಾಗಿದೆ.

ಕರ್ನಾಟಕದ ಏಳು ಸಾಧಕರಿಗೆ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Must Read

Skip to toolbar