Friday, July 1, 2022

Latest Posts

ಈಶಾನ್ಯ ಭಾರತದ ಮೂರು ರಾಜ್ಯಗಳ AFSPA ವ್ಯಾಪ್ತಿ ಕಡಿತಗೊಳಿಸಿದ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಸ್ಸೋಂ-ಮೇಘಾಲಯ ನಡುವಿನ ಸುದೀರ್ಘ ಕಾಲದ ಅಂತರರಾಜ್ಯ ಗಡಿ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದ ಕೇಂದ್ರ ಸರ್ಕಾರ ಇದೀಗ ಈಶಾನ್ಯ ರಾಜ್ಯಗಳಾಗಿರುವ ಅಸ್ಸೋಂ, ನಾಗಾಲ್ಯಾಂಡ್​ ಮತ್ತು ಮಣಿಪುರದಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA) ವ್ಯಾಪ್ತಿಯನ್ನು ಕಡಿತಗೊಳಿಸಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೂರು ರಾಜ್ಯಗಳಲ್ಲಿ ಉಂಟಾಗುತ್ತಿದ್ದ ಗಲಭೆಯನ್ನು ಶಾಸ್ವತವಾಗಿ ಕೊನೆಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅನೇಕ ಒಪ್ಪಂದಗಳನ್ನು ಜಾರಿಗೆ ತಂದಿದ್ದು, ಇದೀಗ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಅಧಿಕಾರ ಕಾಯ್ದೆ(AFSPA) ವ್ಯಾಪ್ತಿಯನ್ನು ಕಡಿತಗೊಳಿಸಿದೆ.
ಈಶಾನ್ಯ ಭಾರತದನಾಗಾಲ್ಯಾಂಡ್​, ಮಣಿಪುರ, ಅಸ್ಸೋಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸೇನೆಗಳಿಗೆ ವಿಶೇಷ ಅಧಿಕಾರವಿದೆ. 1958ರ ಸಶಸ್ತ್ರ ಪಡೆಗಳ ಕಾಯ್ದೆಯ ಮೂಲಕ ವಿಶೇಷ ಅಧಿಕಾರ ನೀಡಲಾಗಿದೆ. ಅಲ್ಲಿ ವಾಸ ಮಾಡುವ ವ್ಯಕ್ತಿ ಕಾನೂನು ನಿಯಮ ಉಲ್ಲಂಘನೆ ಮಾಡಿದ್ದಾನೆಂದು ಭಾವಿಸಿದರೆ ಯೋಧರಿಗೆ ಆತನ ಮೇಲೆ ಗುಂಡು ಹಾರಿಸುವ, ವಾರಂಟ್​ ಇಲ್ಲದೆ ಆತನ ಮನೆ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಈ ನಿಯಮ ವಾಪಸ್ ಪಡೆದುಕೊಳ್ಳುವಂತೆ ಈ ಹಿಂದಿನಿಂದಲೂ ಭಾರಿ ಒತ್ತಡ ಕೇಳಿ ಬರುತ್ತಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss