Friday, July 1, 2022

Latest Posts

ಕೇಂದ್ರ ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ: ಬಿಜೆಪಿ ಮುಖಂಡ ಚಂದು ಪಾಟೀಲ್

ಹೊಸ ದಿಗಂತ ವರದಿ, ಕಲಬುರಗಿ:

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಭಾರತೀಯ ಜನತಾ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಕ್ರೆಡೆಲ್ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಹೇಳಿದರು.

ಅವರು ನಗರದ ಉತ್ತರ ಮಂಡಲದ ವಾರ್ಡ ನಂ 08ರಲ್ಲಿ ಇ-ಶ್ರಮ ಹಾಗೂ ಆಯುಷ್ಮಾನ ಭಾರತ ಕಾರ್ಡ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಡ ವಿತರಣೆ ಮಾಡಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೆಕ ಯೋಜನೆಗಳನ್ನು ಬಡವರಿಗಾಗಿ ಜಾರಿಗೊಳಿಸಿವೆ, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಿದ್ದಾಜಿ ಪಾಟೀಲ ಮಾತನಾಡಿದಲು. ಉತ್ತರ ಮಂಡಲಅಧ್ಯಕ್ಷ ಅಶೋಕ ಮಾನಕರ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ವಾರ್ಡ ನಂ 08ರ ಮಹಾನಗರ ಪಾಲಿಕೆಯ ಸದಸ್ಯ ಸಚಿನ ಕಡಗಂಚಿ,ಶಿವಾನಂದ ಪಿಸ್ತಿ, ಮುಖಂಡರಾದ ಬಸವರಾಜ ಮುನ್ನಳ್ಳಿ, ವಿಜಯಕುಮಾರ ಬಂಗಾರಿ, ವೀನೊದ ಸಂಕಾಣಿ, ಶಿವಾನಂದ ಪಾಟೀಲ, ಸಿದ್ದರಾಮ ಚೌದರಿ, ಕಾಶಿನಾಥ ಸ್ವಾದಿ, ಅಶ್ವತ, ರೇವಣು ಪಟ್ಟಣ, ಸತಿಶ, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss