ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ದೇಶದಲ್ಲಿ ಏಕರೂಪದಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಹೊಸ ಪರೀಕ್ಷಾ ನಿಯಂತ್ರಕ ಸಂಸ್ಥೆ ಪರಾಖ್ ರಚಿಸಿದೆ. ಪ್ರಸ್ತುತ ಸಿಬಿಎಸ್‌ಇ, ಐಸಿಎಸ್‌ಇ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ರಾಜ್ಯ ಬೋರ್ಡ್ ಪರೀಕ್ಷೆ ಮಟ್ಟ ವಿಭಿನ್ನವಾಗಿದೆ. ಇದು ಅಂಕಗಳಲ್ಲಿ ವ್ಯತ್ಯಾಸ ಉಂಟುಮಾಡುತ್ತಿದೆ. ಈ ಕಾರಣದಿಂದ ದೇಶಾದ್ಯಂತ ಏಕರೂಪದಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ.
ದೇಶಾದ್ಯಂತ ಬೋರ್ಡ್ ಪರೀಕ್ಷೆಗಳಲ್ಲಿ ಸಮಾನತೆ ತರುವುದು. 10, 12ನೇ ತರಗತಿ ಮಟ್ಟದಲ್ಲಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲು ಏಕರೂಪದ ಚೌಕಟ್ಟನ್ನು ರಚಿಸುವುದು ಇದರ ಉದ್ದೇಶವಾಗಿದೆ.
ಪರಾಖ್, ಎನ್‌ಸಿಇಆರ್‌ಟಿ ಯ ಭಾಗವಾಗಿ ಕೆಲಸ ಮಾಡಲಿದೆ. ರಾಷ್ಟ್ರೀಯ ಸಾಧನೆ ಸಮೀಕ್ಷೆ, ರಾಜ್ಯ ಸಾಧನೆ ಸಮೀಕ್ಷೆ ಎಸ್‌ಎಎಸ್ ನಡೆಸುವ ಜವಾಬ್ದಾರಿಯೂ ಪರಾಖ್‌ದ್ದಾಗಿದೆ. ಪರಾಖ್ ಕೂಡ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿದೆ.