ನೀವು ಎಂದಾದರೂ ಭೇಟಿ ಕೊಟ್ಟಿದ್ದೀರಾ ಶಿವಮೊಗ್ಗದ ಈ ಗಣಪನ ಮ್ಯೂಸಿಯಂಗೆ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಜಿಲ್ಲೆಗೆ ನೀವು ಭೇಟಿ ನೀಡಿದರೆ, ಇಲ್ಲಿನ ಹೊಸನಗರ ತಾಲೂಕಿನ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಗಣಪತಿ ಮ್ಯೂಸಿಯಂ ನೀವೊಮ್ಮೆ ನೋಡಲೇ ಬೇಕು.

ದೇಶ ವಿದೇಶಗಳಲ್ಲಿರುವ ಸಾವಿರಾರು ರೂಪದ ಗಣಪತಿಗಳನ್ನು ಒಂದೇ ಸೂರಿನಡಿ ನೋಡವ ಅವಕಾಶವನ್ನು ಈ ಮ್ಯೂಸಿಯಂ ನೀಡುತ್ತದೆ. 2017ರಲ್ಲಿ ಆರಂಭವಾದ ಈ ಮ್ಯೂಸಿಯಂನಲ್ಲಿ ಬಾಲ ಗಣಪ, ತಬಲ ಗಣಪ, ವೀಣಾ ಗಣಪ, ಓಲಗ ಗಣಪ, ಒರಿಸ್ಸಾ ಗಣಪ, ದೃಷ್ಠಿ ಗಣಪ, ಪಂಚಮುಖಿ ಗಣಪ, ಶಿವ, ಪಾರ್ವತಿ ಗಣೇಶ, ಗಧಾಯುಧ ಬಲಮುರಿ ಗಣಪ, ದಕ್ಷ ಸಂಹಾರ ಗಣಪ, ಉಯ್ಯಾಲೆ ಗಣಪ ಹೀಗೆ ಮೂರು ಸಾವಿರಕ್ಕೂ ಹೆಚ್ಚು ಗಣಪತಿಯ ಮೂರ್ತಿಗಳು, ಕಲಾಕೃತಿಗಳನ್ನು ಕಾಣಬಹುದಾಗಿದೆ.

ಇವುಗಳಲ್ಲಿ ಕೆಲವು ದೇಶದ ವಿವಿಧ ಭಾಗಗಳಿಂದ ತರಿಸಲಾಗಿದ್ದರೆ ಇನ್ನು ಕೆಲವು ಮೂರ್ತಿಗಳನ್ನು ವಿದೇಶದಿಂದಲೂ ತರಲಾಗಿದೆ. ಮತ್ತೆ ಕೆಲವು ಮೂರ್ತಿಗಳನ್ನು ಇಲ್ಲಿಯೇ ಸಿದ್ಧಪಡಿಸಲಾಗಿದೆ. ಅಪರೂಪದ ಗಣಪನ ರೂಪಗಳನ್ನು ಕಾಣಲು ಇಲ್ಲಿಗೆ ದೇಶ, ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!