Monday, March 27, 2023

Latest Posts

ಸಾಮಾಜಿಕ ಮಾಧ್ಯಮ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ದೂರುಗಳಿಗಾಗಿ ಸಮಿತಿ ಸ್ಥಾಪಿಸಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸಾಮಾಜಿಕ ಮಾಧ್ಯಮ ಮತ್ತು ಇತರ ಇಂಟರ್ನೆಟ್ ಆಧಾರಿತ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಬಳಕೆದಾರರ ದೂರುಗಳನ್ನು ಪರಿಹರಿಸಲು ಕೇಂದ್ರವು ಮೂರು ಸಮಿತಿಗಳನ್ನು ಸ್ಥಾಪಿಸಿದೆ.

ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಆಧಾರದ ಮೇಲೆ ಮೂರು ಕುಂದುಕೊರತೆ ಮೇಲ್ಮನವಿ ಸಮಿತಿ(GAC)ಗಳನ್ನು ಸ್ಥಾಪಿಸಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಆದೇಶ ಹೊರಡಿಸಿದೆ.

ಭಾರತದಲ್ಲಿ ಇಂಟರ್ನೆಟ್ “ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ” ಎಂದು ಖಚಿತಪಡಿಸಲು ಕಾನೂನು ಚೌಕಟ್ಟಿನ ಭಾಗವಾಗಿ ಈ ಸಮಿತಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಕುಂದು ಕೊರತೆಗಳನ್ನು ವಿಚಾರಿಸುವ ಈ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಮತ್ತು ಆನ್‌ಲೈನ್ ಆಗಿರುತ್ತದೆ ಎಂದು ಸಚಿವಾಲಯ ಹೇಳಿದೆ.

ಎಲ್ಲಾ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮಧ್ಯವರ್ತಿಗಳ ನಡುವೆ ತಮ್ಮ ಗ್ರಾಹಕರ ಕಡೆಗೆ ಸ್ಪಂದಿಸುವ ಸಂಸ್ಕೃತಿಯನ್ನು ಈ ಸಮಿತಿಗಳು ಸ್ಥಾಪಿಸಲಿವೆ. ಇದು ವರ್ಚುವಲ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಗ್ರಾಹಕರು ಸಾಮಜಿಕ ಮಾಧ್ಯಮ ಅಥವಾ ಆನ್ಲೈನ್‌ ಫ್ಲಾಟ್‌ಫಾರ್ಮ್‌ ಗಳಲ್ಲಿನ ತಮ್ಮ ದೂರುಗಳ ಬಗ್ಗೆ ಈ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಈ ಹೊಸ ಮೇಲ್ಮನವಿ ಸಂಸ್ಥೆಯ ಮುಂದೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಇತರ ಆನ್‌ಲೈನ್ ಮಧ್ಯವರ್ತಿಗಳ ಕುಂದುಕೊರತೆ ಅಧಿಕಾರಿಯ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಳಕೆದಾರರಿಗೆ ಅವಕಾಶವಿದೆ ಎಂದು ಸಚಿವಾಲಯ ತಿಳಿಸಿದೆ.

“ಸಮಿತಿಯು ಬಳಕೆದಾರರ ಮನವಿಯನ್ನು 30 ದಿನಗಳ ಅವಧಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತದೆ” ಎಂದು ಸಚಿವಾಲಯ ಉಲ್ಲೇಖಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!