ಬೆಲೆ ಕುಸಿತಕ್ಕೆ ಬ್ರೇಕ್ ಹಾಕಿದ ಸರ್ಕಾರ: ಏಜೆನ್ಸಿಗಳಿಗೆ ರೈತರಿಂದಲೇ ಈರುಳ್ಳಿ ಖರೀದಿಸಲು ನಿರ್ದೇಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರಿಂದ ನೇರವಾಗಿ ಈರುಳ್ಳಿಯನ್ನು ಖರೀದಿಸಿ ಏಕಕಾಲದಲ್ಲಿ ಬಳಕೆ ಕೇಂದ್ರಗಳಿಗೆ ರವಾನೆ ಮತ್ತು ಮಾರಾಟ ಮಾಡಲು ತಕ್ಷಣವೇ ಮಾರುಕಟ್ಟೆಗೆ ಮಧ್ಯಪ್ರವೇಶಿಸುವಂತೆ ಸರ್ಕಾರ ತನ್ನ ಖರೀದಿ ಏಜೆನ್ಸಿಗಳಿಗೆ ನಿರ್ದೇಶನ ನೀಡಿದೆ.

ರೈತರಿಂದ ಈರುಳ್ಳಿ ಖರೀದಿಸಲು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕನ್ಸ್ಯೂಮರ್ಸ್ ಕೋಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಗೆ ಸೂಚನೆ ಕೊಟ್ಟಿದೆ.

ಕಡಿಮೆ ಅವಧಿಯಲ್ಲಿ ಪೂರೈಕೆ ಸರಪಳಿಯನ್ನು ಸುಗಮವಾಗಿಡಲು ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಬೆಲೆ ಸ್ಥಿರೀಕರಣ ನಿಧಿ ಯೋಜನೆಯಡಿ ಈರುಳ್ಳಿಯ ಬಫರ್ ಸ್ಟಾಕ್ ಅನ್ನು ರಚಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!