October 18, 2026
Sunday, October 18, 2026
spot_img

ಬಡ, ಮಧ್ಯಮ ವರ್ಗಕ್ಕೆ ಕೇಂದ್ರದ ಬಂಪರ್ ಗಿಫ್ಟ್: 39 ಅಗತ್ಯ ಔಷಧಿಗಳ ಬೆಲೆ ಭಾರಿ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ತಿಂಗಳು ದುಬಾರಿ ಮೆಡಿಸಿನ್ ಬಿಲ್‌ನಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ದೊಡ್ಡ ಸಮಾಧಾನ ತಂದಿದೆ. ಡಯಾಬಿಟಿಸ್, ಹೈ ಬಿಪಿ ಹಾಗೂ ಹಾರ್ಟ್ ಪ್ರಾಬ್ಲಮ್ ಸೇರಿದಂತೆ ಹಲವು ದೀರ್ಘಕಾಲದ ಕಾಯಿಲೆಗಳಿಗೆ ಬಳಸುವ 39 ಅತ್ಯಗತ್ಯ ಔಷಧಿಗಳ ರೀಟೇಲ್ ಬೆಲೆಗೆ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಗರಿಷ್ಠ ಮಿತಿಯನ್ನು ಹೇರಿದೆ. ಡಿಪಿಸಿಒ-2013 ರ ಅಡಿಯಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಕಂಪನಿಗಳು ಎಂಆರ್‌ಪಿ (MRP) ದರವನ್ನು ತಕ್ಷಣವೇ ಕಡಿತಗೊಳಿಸಬೇಕಿದೆ.

ಬಡ ಮತ್ತು ಹಿರಿಯ ನಾಗರಿಕರಿಗೆ ಭಾರಿ ಉಳಿತಾಯ

ಜೀವಮಾನವಿಡೀ ಮಾತ್ರೆಗಳನ್ನು ನೆಚ್ಚಿಕೊಳ್ಳಬೇಕಾದ ರೋಗಿಗಳಿಗೆ, ವಿಶೇಷವಾಗಿ ಪೆನ್ಷನರ್ಸ್ ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆ ಇರುವ ಹಿರಿಯ ನಾಗರಿಕರಿಗೆ ಇದರಿಂದ ಆರ್ಥಿಕ ಹೊರೆ ತಗ್ಗಲಿದೆ. ತಿಂಗಳ ಬಜೆಟ್‌ನಲ್ಲಿ ಔಷಧಿಗೆ ವೆಚ್ಚವಾಗುತ್ತಿದ್ದ ಹಣ ಇನ್ಮುಂದೆ ಗಮನಾರ್ಹವಾಗಿ ಉಳಿತಾಯವಾಗಲಿದೆ.

ಕ್ಯಾಲ್ಸಿಯಂ ಹಾಗೂ ರೇಬೀಸ್ ಇಂಜೆಕ್ಷನ್ ದರ ಪರಿಷ್ಕರಣೆ

ಮೂಳೆ ದೌರ್ಬಲ್ಯ ಹೊಂದಿರುವವರು ಹಾಗೂ ಮಹಿಳೆಯರಿಗೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್-D3 ಮಾತ್ರೆಯ ಗರಿಷ್ಠ ಚಿಲ್ಲರೆ ಬೆಲೆಯನ್ನು ಜಿಎಸ್‌ಟಿ ಸೇರಿ ಪ್ರತಿ ಮಾತ್ರೆಗೆ 8.93 ರೂ.ಗೆ ನಿಗದಿಪಡಿಸಲಾಗಿದೆ. ಇದರೊಂದಿಗೆ, ಶ್ವಾನ ಕಡಿತಕ್ಕೆ ತುರ್ತಾಗಿ ನೀಡಲಾಗುವ ‘ಆ್ಯಂಟಿ-ರೇಬೀಸ್ ಇಮ್ಯುನೊಗ್ಲೋಬುಲಿನ್’ ಇಂಜೆಕ್ಷನ್ ಬೆಲೆಯನ್ನು 119.48 ರೂ.ಗೆ ಪರಿಷ್ಕರಿಸಿ ಆದೇಶಿಸಲಾಗಿದೆ.

Must Read