ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ಪ್ರಮುಖ ಸಂಶೋಧನೆಯೊಂದರಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಬಾಂಧವಗಢ ಅರಣ್ಯದಲ್ಲಿ ಗಮನಾರ್ಹವಾದ ಪುರಾತತ್ವ ಅವಶೇಷಗಳನ್ನು ಬಿಚ್ಚಿಟ್ಟಿದೆ. ಇದು ಇತ್ತೀಚಿನ ಸಮಯದಲ್ಲಿ ನಡೆದ ಅತ್ಯಂತ ಗಮನಾರ್ಹವಾದ ಶೋಧಕಾರ್ಯವಾಗಿದ್ದು 9 ರಿಂದ 11 ನೇ ಶತಮಾನದ ಸಮಯದ ಸುಮಾರು 46 ಕ್ಕೂ ಹೆಚ್ಚು ಅವಶೇಷಗಳನ್ನು ಪತ್ತೆಹಚ್ಚಲಾಗಿದೆ.
ASI ನಡೆಸಿದ ಪರಿಶೋಧನೆಯ ಸಮಯದಲ್ಲಿ ಈ ಕೆಳಗಿನ ಅವಶೇಷ ಗಳು ಪತ್ತೆಯಾಗಿವೆ:
– 9 ನೇ ಶತಮಾನ ನಿಂದ 11 ನೇ ಶತಮಾನ ಸಮಯದ ಕಲಚೂರಿ ಅವಧಿಯ 26 ಪುರಾತನ ದೇವಾಲಯಗಳು ,
– 2 ನೇ ಶತಮಾನದಿಂದ 5 ನೇ ಶತಮಾನದ ಸಂದರ್ಭದಲ್ಲಿ ಬೌದ್ಧವಿನ್ಯಾಸ ಹೊಂದಿರುವ 26 ಗುಹೆಗಳು
– 2ರಿಂದ 5ನೇ ಶತಮಾನದ ಸಮಯದ 2 ಮಠಗಳು, 2 ಸ್ತೂಪಗಳು, 24 ಬ್ರಾಹ್ಮಿ ಶಾಸನಗಳು
– 46 ಶಿಲ್ಪಗಳು, 20 ಚದುರಿದ ಅವಶೇಷಗಳು ಮತ್ತು 19 ನೀರಿನ ರಚನೆಗಳು ಪತ್ತೆಯಾಗಿದ್ದು 46 ಶಿಲ್ಪಗಳಲ್ಲಿ ದೊಡ್ಡದಾದ ವರಾಹ ಶಿಲ್ಪವೂ ಪತ್ತೆಯಾಗಿದೆ.
ಸಂಶೋಧನೆಗಳ ಪ್ರಕರಾ ಈ ಕಾಲಾವಧಿಯು ರಾಜರಾದ ಶ್ರೀ ಭೀಮಸೇನ, ಮಹಾರಾಜ ಪೋತಸಿರಿ, ಮಹಾರಾಜ ಭಟ್ಟದೇವರ ಆಳ್ವಿಕೆಯ ಸಂದರ್ಭವಾಗಿತ್ತು ಎನ್ನಲಾಗಿದ್ದು ಕೌಶಮಿ, ಮಥುರಾ, ಪಾವತ (ಪರ್ವತ), ವೆಜಭಾರದ ಮತ್ತು ಸಪತನೈರಿಕಾ ಶಾಸನಗಳಲ್ಲಿ ಈ ಕುರಿತು ವಿವರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಪ್ರದೇಶವು ಸುಮಾರು 170 ಚದರ ಕಿ.ಮೀ ವ್ಯಾಪ್ತಿಯಲ್ಲಿ ಆವರಿಸಿಕೊಂಡಿದ್ದು 1938 ರ ನಂತರ ಈ ಪ್ರದೇಶದಲ್ಲಿ ಕೈಗೊಳ್ಳಲಾದ ಮೊದಲ ಪರಿಶೋಧನೆ ಇದಾಗಿದೆ ಎಂದು ಪಿಐಬಿ ವರದಿ ಉಲ್ಲೇಖಿಸಿದೆ.