ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಜನವರಿ 5 ರಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಸಿರಿಧಾನ್ಯ ಮತ್ತು ಸಾವಯುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿದೆ.
ಜನವರಿ5 ರಿಂದ7 ರವರೆಗೆ ನಡೆಯುವ ಮೇಳವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಿರಿಧಾನ್ಯಗಳ ಬಹುಉಪಯೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಬರಗಾಲದಲ್ಲಿ ರೈತರಿಗೆ ಬೆಳೆಯಲು ಇದು ಉತ್ತವಾದ್ದು. ಅಪಾಯ ನಿರ್ವಹಣೆ ತಂತ್ರವಾಗಿದೆ. ಇದನ್ನು ಬೆಳೆಯಲು ಹೆಚ್ಚು ನೀರು ಬೇಕಿಲ್ಲ ಹಾಗೂ ಎಷ್ಟೇ ಶುಷ್ಕವಾದ ವಾತಾವರಣ ಇದ್ದರೂ ಇದು ಬದುಕಬಲ್ಲುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ರೈತರು, ಮಾರಾಟಗಾರರು ಹಾಗೂ ರಫ್ತುದಾರರಿಗೆ ಅವಕಾಶ ಒದಗಿಸಲು ಮೇಳ ಆಯೋಜನೆ ಮಾಡಲಾಗುತ್ತಿದೆ. ಒಟ್ಟಾರೆ 248ಮಳಿಗೆಗಳು ನೋಂದಣಿಯಾಗಿವೆ ಎಂದಿದ್ದಾರೆ.