Wednesday, February 28, 2024

ACCIDENT | ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಟ್ರಿಪ್ ಹೊರಟಿದ್ದ 14 ಮಂದಿಗೆ ಜವರಾಯನ ದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, 14 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ರಿಪ್ ಹೊರಟಿದ್ದ ಬಸ್ ಟ್ರಕ್‌ಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದ್ದು, 27 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಿಜನ್ ಪ್ರದೇಶದ ಪ್ರವಾಸಿಗರು ಟ್ರಿಪ್ ಹೊರಟಿದ್ದರು ಎನ್ನಲಾಗಿದೆ.

45 ಪ್ರಯಾಣಿಕರಿದ್ದ ಬಸ್ ಟ್ರಕ್‌ಗೆ ವೇಗವಾಗಿ ಗುದ್ದಿದೆ. ಇದರಿಂದಾಗಿ 14 ಮಂದಿ ಮೃತಪಟ್ಟಿದ್ದು,27 ಮಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!