ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ದೂರ ಆಗಿದ್ದು, ಇವರ ವಿಚ್ಚೇದನ ಅರ್ಜಿ ಕೋರ್ಟ್‌ನಲ್ಲಿದೆ. ಇಬ್ಬರು ಬೇರೆ ಬೇರೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದ ಹಲವು ಫೋಟೋಗಳು ಡಿಲೀಟ್ ಮಾಡಲಾಗಿತ್ತು.
ಇದರ ನಡುವೆ ಭಾನುವಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಹಲ್ ರೇಡಿಯೋ ಜಾಕಿ ಆಗಿರುವ ಆರ್‌ಜೆ ಮಹ್ವಾಶ್ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಚ್ಚರಿ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ಡಿವೋರ್ಸ್ ಪಡೆದ ನಂತರ ಚಹಲ್ ಮತ್ತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಎದ್ದಿತ್ತು. ಈ ವೇಳೆ ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಟಾಂಗ್ ಕೊಡುವಂತೆ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಟ್ಟ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ʻಮಹಿಳೆಯರನ್ನು ದೂಷಿಸುವುದು ಯಾವಾಗಲೂ ಫ್ಯಾಷನ್‌ನಲ್ಲಿದೆʼ ಎಂದು ಬರೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಚಹಲ್ ಅಭಿಮಾನಿಗಳು ಧನಶ್ರೀ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಸೂಪರ್ ಸಂಡೇ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಣೆಗೆ ಬಂದಿದ್ದ ಚಹಲ್ ಗ್ಯಾಲರಿಯಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕುಳಿತಿದ್ದಾರೆ. ಚಹಲ್- ಆರ್.ಜೆ ಮಹ್ವಾಶ್ ಅವರ ಫುಲ್ ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ವಿಧ ವಿಧವಾದ ಕಾಮೆಂಟ್ ಮಾಡುತ್ತಿದ್ದರು.