CINEMA| ಇಂದು ಟಾಲಿವುಡ್‌ ಪೋಷಕ ನಟ ಚಲಪತಿ ರಾವ್ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ವರ್ಷ ಟಾಲಿವುಡ್ ಅನೇಕ ಟಾಪ್ ಸ್ಟಾರ್‌ಗಳನ್ನು ಕಳೆದುಕೊಂಡಿದೆ. ಮೂರು ದಿನಗಳ ಹಿಂದೆ ಡಿಸೆಂಬರ್ 24 ರಂದು ಜನಪ್ರಿಯ ಪೋಷಕ ನಟ ಚಲಪತಿ ರಾವ್ ನಿಧನರಾದರು. ಹೃದಯಾಘಾತದಿಂದ ಅವರು ತಮ್ಮ 78 ನೇ ವಯಸ್ಸಿಗೆ ಕಣ್ಣು ಮುಚ್ಚಿದರು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ, ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ನಿಧನಕ್ಕೆ ಹಲವು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಚಲಪತಿ ರಾವ್ ಅವರ ಪುತ್ರ ನಟ ಮತ್ತು ನಿರ್ದೇಶಕ ರವಿಬಾಬು ಇಲ್ಲಿಯೇ ಇದ್ದಾರೆ ಆದರೆ ಅವರ ಇಬ್ಬರು ಪುತ್ರಿಯರು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ಆದರೆ ಬಂದ ತಕ್ಷಣ ಅಂತಿಮ ಸಂಸ್ಕಾರ ಮಾಡುತ್ತೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲಿಯವರೆಗೂ ಅವರ ದೇಹವನ್ನು ಮಹಾಪ್ರಸ್ಥಾನದ ಫ್ರೀಜರ್‌ನಲ್ಲಿ ಇಡಲಾಗಿತ್ತು.

ಚಲಪತಿ ರಾವ್ ಅವರ ಇಬ್ಬರು ಪುತ್ರಿಯರು ಮಂಗಳವಾರ ರಾತ್ರಿ ಅಮೆರಿಕದಿಂದ ಆಗಮಿಸಿದ್ದರು. ನಟ ಚಲಪತಿ ರಾವ್ ಅವರ ಅಂತ್ಯಕ್ರಿಯೆ ಇಂದು ಮಹಾಪ್ರಸ್ಥಾನದಲ್ಲಿ ನಡೆಯಲಿದೆ. ಚಲಪತಿ ರಾವ್ ಅವರ ಪುತ್ರ ರವಿಬಾಬು ಅವರ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!