ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿಯಲ್ಲಿ ರಚಿನ್ ರವೀಂದ್ರ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶದ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯ ಸಾಧಿಸಿದೆ.
ಇದರಿಂದ ಟೂರ್ನಿಯಿಂದಲೇ ಬಾಂಗ್ಲಾದೇಶ ಮತ್ತು ಅತಿಥೇಯ ಪಾಕಿಸ್ತಾನ ಔಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 236 ರನ್ ಗಳಿಸಿತು.ಈ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 240 ರನ್ ಹೊಡೆದು ಸೆಮಿಫೈನಲ್ ಪ್ರವೇಶಿಸಿತು.
ನ್ಯೂಜಿಲೆಂಡ್ ಪರ ಡಿವೋನ್ ಕಾನ್ವೇ 30 ರನ್, ರಚಿನ್ ರವೀಂದ್ರ 105 ಎಸೆತಗಳಲ್ಲಿ 1 ಸಿಕ್ಸರ್, 12 ಬೌಂಡರಿ ನೆರವಿನಿಂದ 112 ರನ್ ಹೊಡೆದರು. ಟಾಮ್ ಲ್ಯಾಥಮ್ 76 ಎಸೆತಗಳಲ್ಲಿ 55 ರನ್ ಹೊಡೆದರು.