ಮೇಷ
ವಿಶೇಷವಾದುದು ಇಂದು ಘಟಿಸಬಹುದು. ನೀವು ಆರಾಽಸುವ ವ್ಯಕ್ತಿಯ ಜತೆಗೆ ಆಪ್ತತೆ ಹೆಚ್ಚಬಹುದು. ವೃತ್ತಿಯಲ್ಲಿ ಒತ್ತಡ ಕಡಿಮೆ.
ವೃಷಭ
ಸಣ್ಣಪುಟ್ಟ ವಿಷಯಗಳಿಗೂ ಗಮನ ಕೊಡಿ. ಅವೇ ಮಹತ್ವ ದಾಗಬಹುದು. ಅಸಹನೆಯಿಂದ ತಪಿಸದೆ ತಾಳ್ಮೆಯಿಂದ ವ್ಯವಹರಿಸಿ.
ಮಿಥುನ
ಹಳೆಯ ತಪ್ಪು ಮರೆಯಿರಿ. ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ. ಕಷ್ಟದ ಸಮಯದಲ್ಲೂ ನಗು ಇರಲಿ, ನಿಮ್ಮ ಸಂತೋಷಕ್ಕೆ ದಾರಿಯಾಗಲಿದೆ.
ಕಟಕ
ಎಲ್ಲರ ಗಮನದ ಕೇಂದ್ರವಾಗುವಿರಿ. ನಿಮ್ಮ ಸಾಧನೆ ಎಲ್ಲರ ಮನ ಸೆಳೆಯಲಿದೆ. ಹೊಸ ವ್ಯವಹಾರ ಲಾಭ ತರಲಿದೆ, ಚಿಂತೆ ಬೇಡ.
ಸಿಂಹ
ಮನೆಯವರ ಜತೆ ವಾಗ್ವಾದ ಬೇಡ. ವಿವಾದವಿದ್ದರೆ ಶಾಂತಿಯಿಂದ ಪರಿಹರಿಸಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕದು. ಸ್ವಲ್ಪ ನಿರಾಶೆ ಕಾದಿದೆ.
ಕನ್ಯಾ
ನಿಮ್ಮ ಬೆನ್ನ ಹಿಂದೆ ಏನೋ ನಡೆಯುತ್ತಿರ ಬಹುದು. ಅದರ ಹಿನ್ನೆಲೆ ಅರಿಯಿರಿ. ಇಲ್ಲವಾದರೆ ದೊಡ್ಡ ಹಿನ್ನಡೆ ಅನುಭವಿಸುವಿರಿ.
ತುಲಾ
ಕುಟುಂಬದ ಜತೆ ಕಾಲ ಕಳೆಯಿರಿ. ಮನಸ್ಸಿಗೆ ನೆಮ್ಮದಿ ಪಡೆಯಲು ಅದೇ ದಾರಿ. ವೃತ್ತಿಯಲ್ಲಿ ಉನ್ನತಿ, ಜತೆಗೇ ಒತ್ತಡವೂ ಹೆಚ್ಚಲಿದೆ. ಕೆಲವರ ಸಹವಾಸ ಬದಲಿಸಬೇಕು.
ವೃಶ್ಚಿಕ
ವೃತ್ತಿ ಮತ್ತು ಮನೆಯಲ್ಲಿ ಒತ್ತಡ ಹೆಚ್ಚು. ಹೆಚ್ಚುವರಿ ಹೊಣೆಗಾರಿಕೆ. ಪ್ರೀತಿಯ ವಿಷಯ ವಿವಾದವಾಗಲು ಬಿಡಬೇಡಿ. ಭಾವನೆ ಹಂಚಿಕೊಳ್ಳಲು ಹಿಂಜರಿಯದಿರಿ.
ಧನು
ವೃತ್ತಿಯಲ್ಲಿ ಕೆಲವು ತೊಡಕು ಎದುರಾದೀತು.ಅದನ್ನು ನಾಜೂಕಿನಿಂದ ನಿಭಾಯಿಸಿ. ಹಣದ ವ್ಯವಹಾರದಲ್ಲಿ ನಿರ್ಲಕ್ಷ್ಯ ಬೇಡ. ಎಚ್ಚರವಿರಲಿ.
ಮಕರ
ಹಲವಾರು ಕಾರ್ಯವ್ಯವಹಾರದ ಒತ್ತಡ. ಆತ್ಮೀಯರ ಜತೆ ಭಿನ್ನಮತ ನಿವಾರಿಸಲು ಆದ್ಯತೆ ಕೊಡಿ. ಅಜೀರ್ಣ ಸಮಸ್ಯೆ ಸಂಭವ.
ಕುಂಭ
ಯಾರದೋ ಹಸ್ತಕ್ಷೇಪದಿಂದ ಆತ್ಮೀಯರ ಜತೆ ಮನಸ್ತಾಪ ಆದೀತು.ಅದಕ್ಕೆ ಅವಕಾಶ ನೀಡದಿರಿ. ನಡೆನುಡಿಯಲ್ಲಿ ವಿನಯವಿರಲಿ.
ಮೀನ
ನಿಮ್ಮ ಕಾಳಜಿ ಯಾರೂ ವಹಿಸುತ್ತಿಲ್ಲ ಎಂಬ ಭಾವ ಕಾಡಬಹುದು. ವ್ಯಥೆ ಪಡದಿರಿ. ನಿಮ್ಮ ಕರ್ತವ್ಯ ಮಾಡುತ್ತಾ ಸಾಗಿ. ನೆಮ್ಮದಿ ತಾನಾಗಿ ಸಿಗಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ