ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಂದು ಟೀಂ ಇಂಡಿಯಾ ತನ್ನ ಮೊದಲ ಪಂದ್ಯ ಆಡಲಿದೆ. ಬಾಂಗ್ಲಾದೇಶ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಇಂಡಿಯಾ ಶುಭಾರಂಭದ ನಿರೀಕ್ಷೆಯಲ್ಲಿದೆ.
ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯವಾಡಲಿರುವ ರೋಹಿತ್ ಪಡೆ, 2025ರ ಐಸಿಸಿ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಭಾರತ ತಂಡ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಇದುವರೆಗೂ ಭಾರತ ಮತ್ತು ಬಾಂಗ್ಲಾ ನಡುವೆ 41 ಪಂದ್ಯಗಳು ನಡೆದಿದ್ದು 32 ಪಂದ್ಯಗಳಲ್ಲಿ ಭಾರತ, 8ರಲ್ಲಿ ಬಾಂಗ್ಲಾ ಗೆಲುವು ಸಾಧಿಸಿದೆ.