ಚಾಮುಲ್‌ನಿಂದ ಹೈನುಗಾರರಿಗೆ ಯುಗಾದಿ ಬಂಪರ್ ಕೊಡುಗೆ: ಲೀಟರ್ ಹಾಲಿಗೆ 4 ರೂ. ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮುಲ್‌ ಯುಗಾದಿ ಬಂಪರ್ ಕೊಡುಗೆ ನೀಡಿದೆ. ಚಾಮರಾಜನಗರ ಜಿಲ್ಲಾ ಹೈನುಗಾರರಿಗೆ ಒಂದು ಲೀಟರ್ ಹಾಲಿಗೆ ಖರೀದಿ ದರ 4 ರೂ. ಹೆಚ್ಚಳ ಮಾಡಿದೆ.

ಏಪ್ರಿಲ್ 1 ರಿಂದ ಹೊಸ ಖರೀದಿ ದರ ಅನ್ವಯವಾಗಲಿದ್ದು. ಈ ಕುರಿತು ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅಷ್ಟೇ ಅಲ್ಲದೆ ರೈತರಿಗೆ ನೀಡುವ ದರವು ಏರಿಕೆಯಾಗಿದೆ. ಸರ್ಕಾರದ ಪ್ರೋತ್ಸಾಹ ಧನ ಸೇರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 40.20 ರೂ.ಗೆ ಏರಿಕೆ ಮಾಡಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!