ಹೊಸದಿಗಂತ ವರದಿ,ಚಿತ್ರದುರ್ಗ :
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೆಜ್ಜಗಹಳ್ಳಿ ಮಹೇಶ್ ಅವರು ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ಶ್ರವಣಕುಮಾರನ ತಂದೆ, ತಾಯಿಗೆ ಯಾವ ಪರಿಸ್ಥಿತಿ ಬಂದಿತ್ತು. ಅದೇ ಪರಿಸ್ಥಿತಿ ರೇಣುಕಾಸ್ವಾಮಿಯ ತಂದೆ, ತಾಯಿಗೆ ಬಂದೊದಗಿದೆ. ಇದರಿಂದ ಮನಸ್ಸಿಗೆ ತುಂಬಾ ನೋವಾಯಿತು. ಆದ ಕಾರಣ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಬೇಕು. ನಟರಿಂದ ಅಭಿಮಾನಿಗಳಲ್ಲ ಅಭಿಮಾನಿಗಳಿಂದ ನಟರು. ಹಾಗಾಗಿ ಅಭಿಮಾನಿಗಳನ್ನು ಗೌರವದಿಂದ ಕಾಣಬೇಕು ಎಂದರು.
ಇದೇ ಸಂದರ್ಭದಲ್ಲಿ ಮೃತ ರೇಣುಕಾಸ್ವಾಮಿ ಕುಟುಂಬದವರಿಗೆ ೬೦ ಸಾವಿರ ರೂ. ಚೆಕ್ ನೀಡಿದರು.