ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮೃಣಾಲ್ ಠಾಕೂರ್ ಲಕ್ಕಿ ಸಿನಿಮಾ ಸೀತಾರಾಮಂ, ಇದಾದ ನಂತರ ಮೃಣಾಲ್ ಸಿಕ್ಕಾಪಟ್ಟೆ ಶೈನ್ ಆದ್ರು. ಹೆಚ್ಚು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ತೆರೆಕಂಡ ಹಾಯ್ ನಾನ್ನ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ.
ಇನ್ನು ಬಾಲಿವುಡ್‌ನಲ್ಲಿ ನಿರ್ದೇಶನದ ಜೊತೆ ನಿರ್ಮಾಣಕ್ಕೂ ಸಂಜಯ್ ಲೀಲಾ ಬನ್ಸಾಲಿ ಕೈ ಹಾಕಿದ್ದು, ಮೃಣಾಲ್‌ಗೆ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಗಲ್ಲಿ ಬಾಯ್, ಖೋ ಗಯೆ ಹಮ್ ಕಹಾ ಸಿನಿಮಾದ ಸಿದ್ಧಾಂತ್ ಚತುರ್ವೇದಿ ಮೃಣಾಲ್‌ಗೆ ನಾಯಕ ಆಗಲಿದ್ದಾರೆ.