ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರ ಮನೆಯಲ್ಲೂ ಅತೀ ಮುಖ್ಯವಾದ ಜಾಗ ಅಂದ್ರೆ ಅದು ಅಡುಗೆ ಮನೆ. ಅಂತಹ ಅಡುಗೆ ಮನೆಯಲ್ಲಿ ದಿನ ಒಂದಲ್ಲ ಒಂದು ಅಡುಗೆ ತಯಾರಿ ಮಾಡುತ್ತ ಇರುತ್ತಾರೆ. ಆದರೆ ಎಂದಾದರೂ ಅಡುಗೆಯ ಮನೆಯಲ್ಲಿ ಬರುವ ವಾಸನೆ ಬಗ್ಗೆ ಯೋಚನೆ ಮಾಡಿದ್ದೀರಾ? ಅಷ್ಟುಕ್ಕೂ ಅದು ಎಂತಹ ವಾಸನೆ? ಕೆಲವೊಮ್ಮೆ ಮೀನಿನ ಅಡುಗೆ ಅಥವಾ ಮುಂತಾದ ಮಸಾಲಾ ವಾಸನೆಗಳು ಅಡುಗೆ ಮನೆಯ ತುಂಬೆಲ್ಲಾ ಬರೀ ಅಂತಹ ಪದಾರ್ಥಗಳ ವಾಸನೆಯೇ ತುಂಬಿರುತ್ತದೆ. ಅದಕ್ಕಾಗಿ ಒಂದು ಪರಿಹಾರ ಈಗ ನಾವು ಹೇಳ್ತೀವಿ ನೀವು ಅದನ್ನ ಒಮ್ಮೆ ಟ್ರೈ ಮಾಡಿ ನೋಡಿ..
ಕರ್ಪೂರ
ನಿಮ್ಮ ಅಡುಗೆ ಮನೆಯನ್ನು ಪರಿಮಳಯುಕ್ತವಾಗಿಸಲು ಅತ್ಯಂತ ಹಳೆಯ ವಿಧಾನಗಳಲ್ಲಿ ಇದು ಒಂದಾಗಿದೆ. ಕರ್ಪೂರವು ಎಲ್ಲಾ ಅಹಿತಕರ ವಾಸನೆಯನ್ನು ಹೀರಿಕೊಳ್ಳುವ ಮತ್ತು ಮನೆಯನ್ನು ಸುವಾಸನೆಯಿಂದ ತುಂಬಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಕರ್ಪೂರವನ್ನು ಮನೆಯಲ್ಲಿ ಬೆಳಗಿಸಿ.
ವಿನೆಗರ್ ಅಥವಾ ನಿಂಬೆ
ಒಂದು ಪಾತ್ರೆಯಲ್ಲಿ ನಿಂಬೆ ರಸ ಅಥವಾ ವಿನೆಗರ್ ಹಾಕಿ ನೀರು ಹಾಕಿ ಕುದಿಸಿ. ಆಗ ಅದರ ಘಮ ಮನೆ ತುಂಬ ಹರಡಿಕೊಳ್ಳುತ್ತದೆ.
ಕಿಟಕಿ ಬಾಗಿಲು ತೆರೆಯಿರಿ
ನಿಮ್ಮ ಅಡುಗೆಮನೆಯಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಎಲ್ಲವೂ ಒಂದೆರಡು ಗಂಟೆಗಳ ಕಾಲ ತೆರೆದಿಟ್ಟರೆ, ನಿಧಾನವಾಗಿ ವಾಸನೆ ಹೊರಹೋಗುತ್ತದೆ.