ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸಲ್ಮಾನ್ ಅಭಿನಯದ ಸಿಖಂದರ್ ಸಿನಿಮಾ ಈದ್ ಸಂಭ್ರಮದಂದು ತೆರೆಕಾಣಲಿದೆ. ಈ ಸಿನಿಮಾದ ಟ್ರೇಲರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಇದರಲ್ಲಿ ಸೌತ್ ಆಕ್ಟರ್‌ಗಳಿಗೆ ಚಾನ್ಸ್ ನೀಡಲಾಗಿದೆ. ಯಾರೆಲ್ಲಾ ಇದ್ದಾರೆ ನೋಡಿ..
ಸಿಖಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಕನ್ನಡದವರಾಗಿದ್ದರೂ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ನಟನೆ ಮಾಡ್ತಿದ್ದಾರೆ.
ತೆಲುಗು ಒರಿಜಿನ್ ನಟಿ ಕಾಜಲ್ ಅಗರ್‌ವಾಲ್ ಕೂಡ ಸಿನಿಮಾದಲ್ಲಿ ಎರಡನೇ ಹೀರೋಯಿನ್ ಪಾತ್ರದಲ್ಲಿ ನಟಿಸ್ತಿದ್ದಾರೆ.
ಕನ್ನಡದ ಖ್ಯಾತ ನಟ ಕಿಶೋರ್ ಕೂಡ ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ನಟನೆಯ ಮೂಲಕ ಕಿಶೋರ್ ಅವರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅವರ ಖ್ಯಾತಿ ಭರ್ಜರಿ ಹೆಚ್ಚಿದೆ. ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ.