Thursday, September 29, 2022

Latest Posts

ಚಂಡೀಗಢ ವಿವಿ ವಿಡಿಯೋ ಲೀಕ್: ಆರೋಪಿಗಳು 7 ದಿನ ಪೊಲೀಸ್​ ಕಸ್ಟಡಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಆಕ್ಷೇಪಾರ್ಹ ವಿಡಿಯೋ ಲೀಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಓರ್ವ ವಿದ್ಯಾರ್ಥಿನಿ ಮತ್ತು ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು. ಬಳಿಕ ಅವರನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ.

ಆರೋಪಿಗಳಾದ ಸನ್ನಿ, ರಂಕಜ್​ರನ್ನು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ. ವಿಡಿಯೋ ಲೀಕ್​ ಮಾಡಿದ್ದಾಳೆ ಎಂಬ ಆರೋಪ ಹೊತ್ತಿರುವ ಯುವತಿಯನ್ನೂ ಪೊಲೀಸರು ಘಟನೆ ನಡೆದ ದಿನವೇ ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧವೂ ಸೆಕ್ಷನ್ 354 ಸಿ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಂಎಂಎಸ್​ ವಿಡಿಯೋ ಲೀಕ್​ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದ್ದು, ಪ್ರತಿಭಟನೆ ಕೈಬಿಡುವಂತೆ ಧಮ್ಕಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!