52 ದಿನಗಳ ಬಳಿಕ ಚಂದ್ರಬಾಬುಗೆ ಜಾಮೀನು, ಟಿಡಿಪಿ ಕಾರ್ಯಕರ್ತರ ಸಂಭ್ರಮ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಅಂತೂ ಜಾಮೀನು ಸಿಕ್ಕಿದೆ. 52ದಿನಗಳ ಸೆರೆವಾಸದಿಂದ ತಮ್ಮ ನಾಯಕ ಹೊರಬರುತ್ತಿರುವುದರಿಂದ ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿದ್ದಾರೆ.

ಎಪಿಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪಟಾಕಿ ಸಿಡಿಸಲಾಗುತ್ತಿದೆ. ಹನುಮಾನ್ ಜಂಕ್ಷನ್‌ನಲ್ಲಿ ಅಭಿಮಾನಿಗಳು ಚಂದ್ರಬಾಬು ನಾಯ್ಡು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸುತ್ತಿದ್ದಾರೆ. ಎಲ್ಲಾ ಟಿಡಿಪಿ ಕಚೇರಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಅಮರಾವತಿಯಲ್ಲಿರುವ ತೆಲುಗು ದೇಶಂ ಪಕ್ಷದ ಪ್ರಧಾನ ಕಚೇರಿಯ ಎನ್‌ಟಿಆರ್ ಭವನದಲ್ಲಿ, ಜೈ..ಜೈ..ಬಾಬು ಎಂಬ ಘೋಷಣೆಗಳು, ಪಟಾಕಿ ಶಬ್ದದಿಂದ ತುಂಬಿ ಹೋಗಿತ್ತು. ಚಂದ್ರಬಾಬು ವಿರುದ್ಧದ ಯಾವುದೇ ಅಕ್ರಮ ಪ್ರಕರಣ ನಿಲ್ಲುವುದಿಲ್ಲ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.  ಚಂದ್ರಬಾಬು ಅವರನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಕಾನೂನು ಬಾಹಿರ ಎಂದು ಸಾಬೀತಾಗುವ ಭರವಸೆಯನ್ನು ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!