ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾರೆಂಟಿ ಸರಕಾರದ ಯೋಜನೆಗಳಿಂದ ಬೇಸತ್ತ ಜನ ಛೀಮಾರಿ ಹಾಕುವ ಹೊತ್ತು ಬಂದಿದೆ. ಇಂದು ಗೃಹ ಸಚಿವ ಪರಮೇಶ್ವರ್‌ಗೂ ಇಂತಹ ಸಂದರ್ಭ ಎದುರಾಯಿತು. ತುಮಕೂರಿನ ಹುಲಿಯೂರು ದುರ್ಗದ ಜನತಾ ದರ್ಶನದಲ್ಲಿ ರೈತರೊಬ್ಬರು ಸರ್ಕಾರದ ಅನ್ನಭಾಗ್ಯ ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದರು.
ಜನತಾ ದರ್ಶನದಲ್ಲಿ ಮಾತನಾಡಿದ ರೈತರೊಬ್ಬರು..ʻಅಲ್ಲಾ ಸ್ವಾಮಿ ನಮ್ಮ ಸರ್ಕಾರ ಬಂದರೆ ಹತ್ತು ಕೆ.ಜಿ.ಅಕ್ಕಿ ಕೊಡ್ತೇವೆ ಎಂದು ಈಗ ಹಣ ಕೊಡ್ತಿದ್ದೀರಲ್ಲಾ..ನಮಗೆ ನಿಮ್ಮ ದುಡ್ಡು ಬೇಡ, ಹತ್ತು ಕೆಜಿ ಅಕ್ಕಿ ಕೊಡಿ ಸ್ವಾಮಿ ಎಂದು ಅಳಲು ತೋಡಿಕೊಂಡರು. ನೀವು ಕೊಡುತ್ತಿರೋ ಮೂರು ಕೆಜಿ ಅಕ್ಕಿಯಿಂದ ಹೊಟ್ಟೆ ತುಂಬುತ್ತಿಲ್ಲ. ಹೀಗೆ ಆದರೆ, ಮಕ್ಕಳು ಮರಿ ಹೊಟ್ಟೆ ಹಸಿನಿವಿನಿಂದ ಇರಬೇಕಾಗುತ್ತದೆʼ ಎಂದು ನೊಂದು ನುಡಿದರು.
ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್, ಡಿಸಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದರು.