‘ಚಂದ್ರಮುಖಿ 2’ ಸಿನಿಮಾ: ಕಂಗನಾ ರಣಾವತ್​ ಅಭಿನಯಕ್ಕೆ ಮನಸೋತ ಅಭಿಮಾನಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

2023ರ ಬಹುನಿರೀಕ್ಷಿತ ಚಿತ್ರ ‘ಚಂದ್ರಮುಖಿ 2’ ಇಂದು ತೆರೆ ಕಂಡಿದ್ದು, ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್​ ಕೊರಿಯೋಗ್ರಾಫರ್​ ರಾಘವ ಲಾರೆನ್ಸ್​ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರೆ.

ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದ ಈ ಹಾರರ್​ ಕಾಮಿಡಿ ಸಿನಿಮಾಗೆ ಉತ್ತಮ ಬೆಂಬಲ ಸಿಕ್ಕಿದೆ. ಈಗಾಗಲೇ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರೇಕ್ಷಕರು ಹೇಳಿದ್ದೇನು?: ಫಸ್ಟ್​ ಶೋ ನೋಡಿದ ಕೆಲವರು ಸಿನಿಮಾ ಡೀಸೆಂಟ್​ ಆಗಿದೆ ಎಂದಿದ್ದಾರೆ. ಹಾರರ್​ ದೃಶ್ಯಗಳು ಹಾಗೂ ದ್ವಿತಿಯಾರ್ಧ ತುಂಬಾ ಚೆನ್ನಾಗಿದೆ. ಅದರಲ್ಲೂ ನಟಿ ಕಂಗನಾ ರಣಾವತ್​ ಅಭಿನಯ ಅದ್ಭುತವಾಗಿದೆ ಎಂದು ನೆಟ್ಟಿಗರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ನೋಡಿದ ಮತ್ತೊಬ್ಬರು ಮೊದಲಾರ್ಧ ತುಂಬಾ ಮನರಂಜನೆಯಿಂದ ಕೂಡಿತ್ತು. ಹಾಸ್ಯ ನಟ ವಡಿವೇಲು ಅವರ ಹಾಸ್ಯ ನಗು ತರಿಸಿತು ಎಂದಿದ್ದಾರೆ.

ಚಂದ್ರಮುಖಿ 2 ಕಥೆಯೇನು?: ಚಂದ್ರಮುಖಿ 2 ವರ್ತಮಾನ ಮತ್ತು ಭೂತಕಾಲದ ಸನ್ನಿವೇಶಗಳ ಕಥಾ ಹಂದರ ಹೊಂದಿದೆ. ಕುಟುಂಬವೊಂದು ಅರಮನೆಯೊಳಗೆ ಪ್ರವೇಶಿಸುತ್ತದೆ. ಅಲ್ಲಿ ಚಂದ್ರಮುಖಿಯ ಆತ್ಮ ನೆಲೆಸಿದೆ. ಚಂದ್ರಮುಖಿ ರಾಜ ವೆಟ್ಟಿಯಾನ್‌ನ ಮೆಚ್ಚಿನ ನರ್ತಕಿ. ಸಿನಿಮಾಗೂ ಮುಂಚೆ ಬಿಡುಗಡೆಯಾಗಿರುವ ಟ್ರೇಲರ್​ನಲ್ಲಿ ಇಂಥ ಕುತೂಹಲಕಾರಿ ಅಂಶಗಳನ್ನು ಕಾಣಬಹುದು. ಸೇಡು ತೀರಿಸಿಕೊಳ್ಳುವ ಚಂದ್ರಮುಖಿಯ ಆತ್ಮದಿಂದ ಮುಂದೇನಾಗುತ್ತದೆ ಎಂಬುದೇ ಚಿತ್ರದ ತಿರುಳು. ನಿರ್ದೇಶಕ ಪಿ.ವಾಸು ಆಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಭೂಲ್ ಭುಲೈಯ್ಯಾ ಚಿತ್ರವನ್ನು ನೆನಪಿಸುವಂತಿದೆ. ಆದಾಗ್ಯೂ, ಹಳೇ ಸಿನಿಮಾಗಳಿಗಿಂತ ಹೆಚ್ಚು ವಿಶೇಷತೆಗಳನ್ನು ಚಂದ್ರಮುಖಿ 2 ಒಳಗೊಂಡಿದೆ.

ಐದು ಭಾಷೆಗಳಲ್ಲಿ ಬಿಡುಗಡೆ: 2005 ರಲ್ಲಿ ಚಂದ್ರಮುಖಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರೇಕ್ಷರನ್ನು ಸೆಳೆಯುವಲ್ಲಿಯೂ ಸಫಲವಾಗಿತ್ತು. ಮೊದಲ ಭಾಗ ತೆರೆಕಂಡು 18 ವರ್ಷಗಳ ಬಿಡುವಿನ​ ಬಳಿಕ ಇದೀಗ ಚಂದ್ರಮುಖಿ 2 ಬಂದಿದೆ. ಇಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!