ಚಂದ್ರಯಾನ 3 ಸಕ್ಸಸ್ ಅಲ್ಲೂ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್: ನೆಟ್ಟಿಗರು ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಚಂದ್ರಯಾನ 3 ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.. ಈ ಐತಿಹಾಸಿಕ ಕ್ಷಣಕ್ಕೆ ಶುಭಾಶಯ, ಅಭಿನಂದನೆಗಳು ಬರುತ್ತಿದೆ.

ಈ ನಡುವೆ ಕಾಂಗ್ರೆಸ್ ಕೂಡ ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಟ್ವೀಟ್ ಮಾಡಿದೆ. ಈ ಅಭಿನಂದನೆಗಳ ಟ್ವೀಟ್‌ನಿಂದಕಾಂಗ್ರೆಸ್ ಪೇಚಿಗೆ ಸಿಲುಕಿದೆ.

ಕಾಂಗ್ರೆಸ್ ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಟ್ವೀಟ್‌ನಲ್ಲಿ ಜವಾಹರ್ ಲಾಲ್ ನೆಹರೂ ದೂರದೃಷ್ಟಿ, ನೆಹರೂ ಹಾಕಿ ಕೊಟ್ಟ ಅಡಿಪಾಯ, ನೆಹರೂ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಯತ್ನವೇ ಚಂದ್ರಯಾನ 3 ಫಲಿತಾಂಶ ಎಂದು ಟ್ವೀಟ್ ಮಾಡಿದೆ. ಶುಭಾಶಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿ ಟೀಕೆಗೆ ಗುರಿಯಾಗಿದೆ.

ಸ್ವತಂತ್ರ ಭಾರತದಲ್ಲಿ ಪ್ರಧಾನಿ ಜವಾಹರ್ ಲಾಲ್ ನೆಹರೂ ದೂರದೃಷ್ಟಿ ಫಲವಾಗಿ ಆರಂಭಗೊಂಡ ಭಾರತದ ಬಾಹ್ಯಾಕಾಶ ಸಂಸ್ಥೆ ಇದೀಗ ಫಲಕೊಡುತ್ತಿದೆ.ಇಂದು ಚಂದ್ರಯಾನ 3ರ ಫಲಿತಾಂಶದ ಹಿಂದೆ ಹಲವು ಪ್ರಯತ್ನಗಳಿವೆ. ಜವಾಹರ್ ಲಾಲ್ ನೆಹರೂ 1962ರಲ್ಲಿ ಇಸ್ರೋ ಸ್ಥಾಪಿಸಿದರು. ಎಪ್ರಿಲ್ 19, 1975ರಂದು ಆರ್ಯಭಟ ಸ್ಯಾಟಲೈಟ್ ಲಾಂಚ್ ಮಾಡಲಾಗಿತ್ತು. ಎಪ್ರಿಲ್3, 1984ರಲ್ಲಿ ಭಾರತ ಮೊದಲ ಬಾರಿಗೆ ಬಾಹ್ಯಕಾಶಕ್ಕೆ ಕಾಲಿಟ್ಟಿತು. ಅಕ್ಟೋಬರ್ 22, 2008ರಲ್ಲಿ ಚಂದ್ರಯಾನ 1 ಮಿಷನ್ ಆರಂಭಿಸಲಾಯಿತು. ನವೆಂಬರ್ 5, 2013ರಂದು ಮಂಗಳ ಮಿಷನ್ ಆರಂಭಿಸಲಾಗಿತ್ತು. ನೆಹರೂ ವಿಷನ್‌ನಿಂದ ಬಾಹ್ಯಾಕಾಶ ಪ್ರಕಾಶಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಚಂದ್ರಯಾನ ಯಶಸ್ಸಿನ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿದ ಟ್ವೀಟ್ ಪೋಸ್ಟ್ ಮಾಡಿ ಹಲವರು ಕಾಂಗ್ರೆಸ್ ವಿರುದ್ದ ಮುಗಿ ಬಿದ್ದಿದ್ದಾರೆ.

ಕಾಂಗ್ರೆಸ್ ಒಂದು ಕುಟುಂಬ ಹೊರತು ಇನ್ನೇನು ಯೋಚನೆ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಒಂದು ಕುಟುಂಬವೇ ಎಲ್ಲಾ. ಕಾಂಗ್ರೆಸ್ ಈ ಪ್ರಯತ್ನ ಮಾಡಿದ್ದರೆ ಚಂದ್ರನಲ್ಲೂ ನೆಹರೂ ಹೆಸರು ಇಡುತ್ತಿದ್ದರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ಇಸ್ರೋಗೆ ಅಭಿನಂದನೆಗಳು.ಭಾರತ ಇದೀಗ ಚಂದ್ರನ ಮೇಲೆ ಅತ್ಯಂತ ಹೆಮ್ಮೆಯಿಂದ ಬೀಗುತ್ತಿದೆ. ಜೊತೆಗೆ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಫೋಟೋವನ್ನು ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!