ಶೀಘ್ರದಲ್ಲೇ ಚಂದ್ರಯಾನ-3 ಪ್ರಾಜೆಕ್ಟ್‌ ಶುರು: ಇಸ್ರೋ ಮುಖ್ಯಸ್ಥರ ಹೇಳಿಕೆಯಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಚಂದ್ರಯಾನ-3 ಯೋಜನೆಯನ್ನು ಜುಲೈನಲ್ಲಿ ಪ್ರಾರಂಭಿಸಲಾಗುವುದು. ಇದಕ್ಕೆ ಸಂಬಂಧಿಸಿದ ಕೆಲಸ ಆರಂಭವಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ. ಸೋಮವಾರ ಜಿಎಸ್‌ಎಲ್‌ವಿ-ಎಫ್‌12 ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈನಲ್ಲಿ ಚಂದ್ರಯಾನ-3 ಯೋಜನೆ ಹಮ್ಮಿಕೊಳ್ಳಲಾಗುವುದು ಎಂದರು.

ಅದರ ಬಗ್ಗೆ ವಿವರಿಸುತ್ತಾ.. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಮೂರು ರೀತಿಯ ಮಾಡ್ಯೂಲ್‌ಗಳನ್ನು ಹೊಂದಿರುತ್ತದೆ. ಮೊದಲನೆಯದು ಪ್ರೊಪಲ್ಷನ್ ಮಾಡ್ಯೂಲ್, ಎರಡನೆಯದು ಲ್ಯಾಂಡರ್ ಮಾಡ್ಯೂಲ್ ಮತ್ತು ಮೂರನೆಯದು ರೋವರ್ ಮಾಡ್ಯೂಲ್. ಇಸ್ರೋ ಈಗಾಗಲೇ ಎರಡು ಬಾರಿ ಚಂದ್ರನತ್ತ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿದೆ ಎಂದರು.

ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ವಿನ್ಯಾಸಗೊಂಡಿರುವ ಚಂದ್ರನ ಉಪಗ್ರಹ ಈಗಾಗಲೇ ಶ್ರೀಹರಿಕೋಟಾ ತಲುಪಿದೆ ಎಂದು ಸೋಮನಾಥ್ ತಿಳಿಸಿದರು. ಚಂದ್ರಯಾನ-3 ಅನ್ನು ಹೊತ್ತೊಯ್ಯುವ ಎಲ್‌ವಿಎಂ ರಾಕೆಟ್ ಅನ್ನು ಪ್ರಸ್ತುತ ಬಾಹ್ಯಾಕಾಶ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸೋಮನಾಥ್ ಸ್ಪಷ್ಟಪಡಿಸಿದ್ದಾರೆ. ಚಂದ್ರಯಾನ-2 ಕಳುಹಿಸಿದ ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಮೇಲ್ಮೈಯಲ್ಲಿರುವ ಆರ್ಬಿಟರ್ ಇನ್ನೂ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!