Tuesday, October 3, 2023

Latest Posts

ಚಂದ್ರಯಾನ ಯಶಸ್ಸು: ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರನ್ನು ಸನ್ಮಾನಿಸಿದ ಸಚಿವ ಎಚ್.ಕೆ.ಪಾಟೀಲ್

ಹೊಸದಿಗಂತ ವರದಿ , ಗದಗ:

ಚಂದ್ರಯಾನ ಯಶಸ್ವಿಗೊಳಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ವಿಜ್ಞಾನಿಗಳಲ್ಲಿ ಒಬ್ಬರಾದ ನಗರದ ವೀರನಾರಾಯಣ ದೇವಸ್ಥಾನದ ಹತ್ತಿರದ ನಿವಾಸಿ ಸುದೀಂದ್ರ ಬಿಂದಗಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ಸುಧೀಂದ್ರ ಬಿಂದಿಗಿ ಅವರು ಚಂದ್ರಯಾನ ಯಶಸ್ವಿ, ಸಂಶೋಧನೆ ಹಾಗೂ ಚಂದ್ರಯಾನದ ರೋಚಕ ಅಧ್ಯಯನವನ್ನು ವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಗುರಣ್ಣ ಬಳಗಾನೂರ,ಶ್ರೀ ನಿವಾಸ ಹುಯಿಲಗೋಳ,ಪ್ರಭು ಬುರಬುರೆ,ಬಲರಾಮ ಬಸವಾ,ವಿನೋದ ಶಿದ್ಲಿಂಗ,ಸಿದ್ದು ಪಾಟೀಲ ವಾದಿರಾಜ ಸೊರಟೂರು,ಪರಿಮಳ ಸೊರಟೂರ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!