ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ: ಶೇ.10 ಯುನಿಟ್‌ ನೀಡಲು ತೀರ್ಮಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಬದಲಾವಣೆಯಾಗಿದ್ದು, ಶೇಕಡವಾರು 10ರಷ್ಟು ಬದಲು 10 ಯುನಿಟ್‌ ಫ್ರೀ ವಿದ್ಯುತ್ ನೀಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಎಚ್‌.ಕೆ.ಪಾಟೀಲ್‌ ಮಾಹಿತಿ ನೀಡಿದ್ದು, ಈ ಮೊದಲು ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಯುನಿಟ್​ಗಿಂತ ಶೇ. 10ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ ಶೇಕಡವಾರು ಬದಲಾಗಿ 10 ಯುನಿಟ್ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋ. ರೂ. ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!