ಪ್ರತೀ ರಾಮ ನವಮಿಯಂದು ರಾಮಲಲಾನಿಗೆ ‘ಸೂರ್ಯ ತಿಲಕ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ರಾಮ ನವಮಿಗೆ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿರುವ ಜ. 22ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾನ ಹಣೆಗೆ ಸೂರ್ಯ ತಿಲಕ ಇಡಲಾಗುತ್ತದೆ. ಚೈತ್ರ ಮಾಸದ ಒಂಬತ್ತನೇ ದಿನದಲ್ಲಿ ನಡೆಯುವ ಈ ಘಟನೆಯು ಭಗವಾನ್ ರಾಮನ ಜನ್ಮವನ್ನು ಸೂಚಿಸುತ್ತದೆ.

ಇದಕ್ಕಾಗಿ ರಾಮ ಮಂದಿರದ ಗರ್ಭಗುಡಿಗೆ ಸೂರ್ಯನ ಕಿರಣಗಳು ಪ್ರವೇಶಿಸುವಂತೆ ಮಾಡಲು ಮಸೂರ ಮತ್ತು ಕನ್ನಡಿಗಳ ಸಂಕೀರ್ಣ ಜಾಲ ಬಳಸಲಾಗುತ್ತದೆ.

“ಸೂರ್ಯ ತಿಲಕ’ ವ್ಯವಸ್ಥೆಯನ್ನು ಸಿಎಸ್‌ಐಆರ್- ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ಎಸ್.ಕೆ. ಪಾಣಿಗ್ರಾಹಿ ನೇತೃತ್ವದ ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ.

ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವು ಮಧ್ಯಾಹ್ನ 12 ರಿಂದ ಆರು ನಿಮಿಷಗಳ ಕಾಲ ಇರುತ್ತದೆ. ಇದಕ್ಕಾಗಿ ದೇವಾಲಯದ ಮೂರನೇ ಮಹಡಿಯಲ್ಲಿ ಆಪ್ಟಿಕಲ್ ಲೆನ್ಸ್ ಅನ್ನು ಇರಿಸಲಾಗಿದ್ದು, ಇದರ ಮೂಲಕ ಸೂರ್ಯನ ಕಿರಣ ಒಳ ಪ್ರವೇಶಿಸುತ್ತದೆ. ಪೈಪ್‌ಗಳಲ್ಲಿ ಇರಿಸಲಾದ ರಿಫ್ಲೆಕ್ಟರ್‌ಗಳ ಸರಣಿಯ ಮೂಲಕ ನೆಲಮಹಡಿಯನ್ನು ತಲುಪುತ್ತದೆ ಎಂದು ಸಿಬಿಆರ್‌ಐನ ಮುಖ್ಯ ವಿಜ್ಞಾನಿ ಆರ್. ಧರಮರಾಜು ತಿಳಿಸಿದ್ದಾರೆ.

ಅಯೋಧ್ಯೆ ದೇವಾಲಯ ನಿರ್ಮಾಣದಲ್ಲಿ ಅತ್ಯಂತ ಮಹತ್ವಪೂರ್ಣ ಮಾಹಿತಿಗಳನ್ನು ನೀಡಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ “ಸೂರ್ಯ ತಿಲಕ” ಕ್ಕೆ ಬೇಕಾದ ಯಾಂತ್ರಿಕ ಮತ್ತು ರಚನಾತ್ಮಕ ವಿನ್ಯಾಸಕ್ಕೂ ಕೊಡುಗೆ ನೀಡಿದೆ ಎಂದು ಸಿಬಿಆರ್‌ಐಯ ಹಿರಿಯ ವಿಜ್ಞಾನಿ ದೇಬ್ದುತ್ತ ಘೋಷ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!