ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾನವಸಹಿತ ಗಗನಯಾನ ಯೋಜನೆಯ ಸಿಬ್ಬಂದಿ ರಕ್ಷಕ ವಾಹಕದ ಪ್ರಾಯೋಗಿಕ ಪರೀಕ್ಷೆಯ ಉಡಾವಣಾ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದೆ.
ಈ ಹಿಂದೆ ಬೆಳಗ್ಗೆ 7 ರಿಂದ 9 ನಡುವೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿತ್ತು. ಇದೀಗ ಪರಿಷ್ಕೃತ ಅವಧಿಯಂತೆ ಅಕ್ಟೋಬರ್ 21 ರಂದು ಬೆಳಗ್ಗೆ 8 ಗಂಟೆಗೆ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಗಗನಯಾನ ಮಿಷನ್ ಪ್ರಮುಖ ಭಾಗವಾದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್‌ನ ಪರೀಕ್ಷಾರ್ಥ ಪ್ರಯೋಗವನ್ನು ನವೀಕರಿಸಲಾಗಿದ್ದು, ಅಕ್ಟೋಬರ್ 21 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ನಡೆಸಲಾಗುವುದು. ಈ ಹಿಂದಿನ ಸಮಯ 7 ರಿಂದ 9 ಆಗಿತ್ತು. ಇದು ಅಲ್ಪಾವಧಿಯ ಉಡಾವಣೆಯಾಗಿದೆ. ಉಡಾವಣಾ ವೀಕ್ಷಣಾ ಗ್ಯಾಲರಿಯಿಂದ ಜನರು ವೀಕ್ಷಣೆಗೆ ನೋಂದಣಿ ಮಾಡಿಕೊಳ್ಳಬಹುದು. ಕಡಿಮೆ ಜನರಿಗೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದ ತಿಳಿಸಿದೆ.
TV-D1 Flight Test:
The test is scheduled for October 21, 2023, at 0800 Hrs. IST from the First launchpad at SDSC-SHAR, Sriharikota.It will be a short-duration mission and the visibility from the Launch View Gallery (LVG) will be limited.
Students and the Public can witness… pic.twitter.com/MROzlmPjRa
— ISRO (@isro) October 17, 2023
ಇಸ್ರೋದ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶ್ರೀಹರಿಕೋಟಾದಿಂದ ಉಡಾವಣೆಯನ್ನು ವೀಕ್ಷಿಸಬಹುದು. ಅಕ್ಟೋಬರ್ 17 ಸಂಜೆ 6 ಗಂಟೆಗೆ ನೋಂದಣಿ ಆರಂಭವಾಗಲಿದೆ.